ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿವೃತ್ತ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಮಾಡಿದ ಗೆಳೆಯರ ಬಳಗ

ಬಿಎಸ್ಎಫ್ ನಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ತಮ್ಮ ಊರಿಗೆ ಆಗಮಿಸಿದ ಯೋಧ ಸುರೇಶ ರಾಮು ದೇವೂರ ಅವರನ್ನು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರೇಲ್ವೆ ನಿಲ್ದಾಣದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗ, ಆರತಿ ಎತ್ತಿ, ಭಾರತ ಮಾತೆಯ ಭಾವ ಚಿತ್ರ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು.

1999 ರಲ್ಲಿ ಬಿಎಸ್ಎಫ್ ಗೆ ಸೇರ್ಪಡೆಗೊಂಡಿದ್ದ ಸುರೇಶ, ಜಮ್ಮು ಕಾಶ್ಮೀರ, ಪಂಜಾಬ, ಆಸಾಂ ಸೇರಿದಂತೆ ಹಲವು ಗಡಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೇಶಕ್ಕಾಗಿ ಕಾರ್ಯನಿರ್ವಹಿಸಿದ್ದು ಅತಿ ಸಂತೋಷ ತಂದಿದೆ. ಹಾಗೆ ನಿವೃತ್ತಿ ಜೀವನದಲ್ಲೂ ಕೂಡ ಬಿಎಸ್ಎಫ್ ಕುರಿತು ಯುವಕರಿಗೆ ಅರಿವು ಮೂಡಿಸುವ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.

Edited By :
Kshetra Samachara

Kshetra Samachara

07/04/2022 11:51 am

Cinque Terre

24.7 K

Cinque Terre

13

ಸಂಬಂಧಿತ ಸುದ್ದಿ