ಕಲಘಟಗಿ : ಹೌದು ವೀಕ್ಷಕರೇ ತಾವೇನಾದರೂ ಗ್ರಾಹಕ ಸೇವಾ ಕೇಂದ್ರದಲ್ಲಿ ತಮ್ಮ ಹೆಬ್ಬೆಟ್ಟು ಕೊಟ್ಟು ದುಡ್ಡು ತೆಗೆದುಕೊಳ್ಳುವ ಮುಂಚೆ ಹತ್ತು ಬಾರಿ ಯೋಚಿಸಿ ಯಾಕೆ ಅಂದ್ರೆ ನಿಮ್ಮ ಖಾತೆಯಲ್ಲಿ ಇರುವ ದುಡ್ಡು ಮಂಗಮಾಯ ಆಗೋದು ಖಚಿತ. ಇದೇನಪ್ಪ ಸ್ಟೋರಿ ಅಂತೀರಾ ಅದನ್ನ ನಾವು ಹೇಳ್ತೀವಿ ಬನ್ನಿ.
ಕಲಘಟಗಿ ಪಟ್ಟಣದಲ್ಲಿ ಇರುವ ಸಿ ಎಸ್ ಸೇವಾ ಕೇಂದ್ರದ ಮಾಲೀಕ ಎಸ್ ಬಿ ಐ ಫ್ರಾಂಚೈಸಿ ಪಡೆದಿದ್ದು ಜನರಿಗೆ ಹೆಬ್ಬೆಟ್ಟು ಪಡೆದು ದುಡ್ಡು ನೀಡುತ್ತಿದ್ದ. ಆದರೆ ಈ ಆಸಾಮಿ ಮಾಡಿದ ಗೋಲ್ಮಾಲ್ ಏನಂದ್ರೆ ಇಲ್ಲಿ ದುಡ್ಡು ಪಡೆಯಲು ಬರುತ್ತಿದ್ದ ಗ್ರಾಹಕರ ಖಾತೆಯಲ್ಲಿ ಸಾವಿರಾರು ಹಣವನ್ನು ತನ್ನ ಖಾತೆಗೆ ವರ್ಗಾಯಿಸಿ ಕೊಳ್ಳುತ್ತಿದ್ದನಂತೆ. ಅದೇ ರೀತಿ ಗ್ರಾಹಕರಿಗೆ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದು ಜನರು ಕಂಗಾಲಾಗಿ ಹೋಗಿದ್ದಾರೆ. ಇದರ ಬಗ್ಗೆ ಎಸ್ ಬಿ ಐ ಬ್ಯಾಂಕ್ ಗೆ ಇಲ್ಲಿಯ ಜನರು ದೂರು ನೀಡಿದ್ದಾರೆ.
ತಕ್ಷಣ ಸ್ಪಂದಿಸಿದ ಇಲ್ಲಿಯ ಬ್ಯಾಂಕ್ ಮ್ಯಾನೇಜರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಗ್ರಾಹಕ ಸೇವಾ ಕೇಂದ್ರದ ಐಡಿ ರದ್ದು ಗೊಳಿಸಿದ್ದಾರೆ. ಹಣ ಕಳೆದುಕೊಂಡ ನೂರಾರು ಜನರು ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಮ್ಯಾನೇಜರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಹಣ ದೋಚಿದ ಸೇವಾ ಕೇಂದ್ರದ ಮಾಲೀಕ ನಾಪತ್ತೆ ಆಗಿದ್ದು ಮುಂದೆ ನಮ್ಮ ಗತಿ ಏನೆಂದು ಇಲ್ಲಿಯ ಜನರಿಗೆ ತಿಳಿಯದಂತಾಗಿದೆ. ಕೂಡಲೇ ಪರಿಶೀಲನೆ ನಡೆಸಿ ಹಣ ಕಳೆದುಕೊಂಡ ಗ್ರಾಹಕರಿಗೆ ಹಣ ಮರಳುವಂತೆ ಮಾಡಲಾಗುತ್ತದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಹಳ್ಳೂರ ಭರವಸೆ ನೀಡಿದ್ದಾರೆ.
ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/12/2024 12:44 pm