ಬೆಂಗಳೂರು: ಶಿಶಿರ್ ಹಾಗೂ ಗೋಲ್ಡ್ ಸುರೇಶ್ ಇವರು ಬಿಗ್ ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ. ಈ ವಾರ ಬಿಗ್ ಬಾಸ್ ಸೀಸನ್ 11ರಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಶಶಿರ್ ಹಾಗೂ ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸದ್ಯ ಬಿಗ್ ಬಾಸ್ 11ರ 11ನೇ ವಾರ ಪಂಚಾಯತಿ ನಡೆಯುತ್ತಿದ್ದು, ಈ ವಾರ ಚೈತ್ರ ಕುಂದಾಪುರ, ತ್ರಿವಿಕ್ರಮ, ಧನರಾಜ್, ಹನಮಂತು, ಭವ್ಯಾ, ರಜತ್, ಶಿಶಿರ್, ಮೋಕ್ಷಿತ್ ಈ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ನಿನ್ನೆಯ ಎಪಿಸೋಡ್‌ನಲ್ಲಿ ತ್ರಿವಿಕ್ರಮ್ ಹಾಗೂ ಹನಮಂತು ಸೇವ್ ಆಗಿದ್ದು, ಇಂದು ಬಿಗ್ ಬಾಸ್ ಮನೆಯಿಂದ ಶಿಶಿರ್ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
PublicNext
15/12/2024 10:42 am