ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಘಟನೆ ಸಂಬಂಧವಾಗಿ ಅರೆಸ್ಟ್ ಆಗಿದ್ದ ಸ್ಟಾರ್ ನಟ ಅಲ್ಲು ಅರ್ಜುನ್ 24 ಗಂಟೆಯ ಒಳಗಾಗಿ ರಿಲೀಸ್ ಆಗಿದ್ದಾರೆ. ಬಂಧನದ ವೇಳೆ ಅಲ್ಲು ಅರ್ಜುನ್ ಅವರು ಪತ್ನಿ ಸ್ನೇಹಾ ರೆಡ್ಡಿ ಅವರಿಗೆ ಮುತ್ತಿಕ್ಕಿ ಪೊಲೀಸರೊಂದಿಗೆ ಹೋಗಿದ್ದರು. ಆ ಬಳಿಕ ಸ್ನೇಹಾ ರೆಡ್ಡಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಜೋರಾಗಿ ನಡೆದಿದೆ. ಕೋಟಿ ಕೋಟಿಗೆ ಒಡತಿ ಸ್ನೇಹಾ ರೆಡ್ಡಿ ಹಿನ್ನೆಲೆ ಏನು ಅಂತ ಇಲ್ಲಿದೆ ನೋಡಿ...
ಅಲ್ಲು ಅರ್ಜುನ್ ಪತ್ನಿ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಸ್ನೇಹಾ ರೆಡ್ಡಿ ಒಬ್ಬ ಯಶಸ್ವಿ ಉದ್ಯಮಿ ಮಹಿಳೆ. ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಸ್ನೇಹಾ ರೆಡ್ಡಿ ಕೋಟ್ಯಂತರ ರೂಪಾಯಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.
ಅಲ್ಲು ಅರ್ಜುನ್ ಮತ್ತು ಸ್ನೇಹಾ ಮೊದಲು ಭೇಟಿಯಾದದ್ದು ಮದುವೆಯೊಂದರಲ್ಲಿ. ಆ ಸಮಯದಲ್ಲಿ ಅಲ್ಲು ಅರ್ಜುನ್‌ಗೆ ಸ್ನೇಹಾ ಅವರನ್ನು ಮೊದಲ ಬಾರಿಗೆ ಭೇಟಿಯಾಗುವ ಅವಕಾಶ ಸಿಕ್ಕಿತು. ಮೊದಲ ನೋಟದಲ್ಲೇ ಪ್ರೀತಿ ಮೂಡಿತು. ಅಲ್ಲು ಅರ್ಜುನ್ ಅವರು ಸ್ನೇಹಾ ಅವರ ಸೌಂದರ್ಯ ಮತ್ತು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದರು. ಕ್ರಮೇಣ ಇಬ್ಬರೂ ಸ್ನೇಹಿತರಾಗಿ ಪರಸ್ಪರ ಪ್ರೀತಿಸತೊಡಗಿದರು. ಸ್ನೇಹಾ ಮತ್ತು ಅಲ್ಲು ಅರ್ಜುನ್ 2011ರಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು.
ಸ್ನೇಹಾ ಮತ್ತು ಅಲ್ಲು ಅರ್ಜುನ್‌ಗೆ ಇಬ್ಬರು ಮಕ್ಕಳಿದ್ದಾರೆ. ಸ್ನೇಹಾ ಕುಟುಂಬಕ್ಕೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ಆದರೆ, ಅಲ್ಲು ಅರ್ಜುನ್ ಅವರ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ನೇಹಾ ಕುಟುಂಬದ ಜವಾಬ್ದಾರಿಗಳು ಮತ್ತು ವ್ಯವಹಾರವನ್ನು ನಿರ್ವಹಿಸುತ್ತಾರೆ.
ಸ್ನೇಹಾ ಯಶಸ್ವಿ, ಶ್ರೀಮಂತ ವ್ಯಾಪಾರ ಕುಟುಂಬದಿಂದ ಬಂದವರು. ಹೈದರಾಬಾದ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಅವರು 2016ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಹೈದರಾಬಾದ್‌ನ ಜುಬಿಲಿ ಪ್ರದೇಶದಲ್ಲಿ 'ಪಿಕಾಬೂ' ಎಂಬ ಆನ್‌ಲೈನ್ ಫೋಟೋ ಸ್ಟುಡಿಯೊವನ್ನು ಪ್ರಾರಂಭಿಸಿದರು. ಸ್ನೇಹಾ ಅವರ ಸ್ಟುಡಿಯೋ ಯಶಸ್ವಿಯಾಗಿ ನಡೆಯುತ್ತಿದೆ.
ವರದಿಗಳ ಪ್ರಕಾರ, ಸ್ನೇಹಾ ರೆಡ್ಡಿ ಅವರ ನಿವ್ವಳ ಮೌಲ್ಯ ಸುಮಾರು 42 ಕೋಟಿ ರೂಪಾಯಿ. ಅವರು ಸಾಮಾಜಿಕ ಜಾಲತಾಣದಲ್ಲಿ ಆಯಕ್ಟೀವ್ ಆಗಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಅಲ್ಲು ಅರ್ಜುನ್ ಅವರು ಬಿಡುಗಡೆ ಕಂಡಿರೋದು ಅವರಿಗೆ ಖುಷಿ ಇದೆ.
PublicNext
15/12/2024 08:50 am