ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

TOP 10 ನ್ಯೂಸ್ ಆಫ್ ಧಾರವಾಡ ಜಿಲ್ಲೆ: 21-Mar-2022

1. ಮಾ.28, 29ರಂದು ಮುಷ್ಕರ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಶನ್‌ಗಳ ಕರೆಯ ಮೇರೆಗೆ ಎಐಯುಟಿಯುಸಿ ಜಿಲ್ಲಾ ಸಮಿತಿಯಿಂದ ಇದೇ ಮಾರ್ಚ್ 28 ಹಾಗೂ 29ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ.

https://publicnext.com/article/nid/Hubballi-Dharwad/Politics/node=622558

2. ಚಾಂಗದೇವ ಜಾತ್ರೆ ಆರಂಭ

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಕೈನ್ನಡಿಯಂತಿರುವ ಧಾರ್ಮಿಕ ಕ್ಷೇತ್ರ ಯಮನೂರ ರಾಜಾಬಾಗ ಸವಾರ ಊರ್ಫ್ ಚಾಂಗದೇವ ಮಹಾರಾಜರ ಜಾತ್ರೆ ಶನಿವಾರದಿಂದ ಆರಂಭಗೊಂಡಿದ್ದು, ಸುಮಾರು ಒಂದು ತಿಂಗಳವರೆಗೆ ಜರುಗಲಿದೆ.

https://publicnext.com/article/nid/Hubballi-Dharwad/Cultural-Activity/Religion/node=622055

3. ನಾನು ಎಲ್ಲೇ ನಿಂತ್ರೂ ಗೆಲ್ತಿನಿ

ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ನಾನು ಗೆಲ್ಲುತ್ತೇನೆ. ಬಾದಾಮಿಯವರೂ ಕರೆಯುತ್ತಾರೆ ಹಾಗೇ ಚಾಮುಂಡೇಶ್ವರಿಯವರೂ ಕರೆಯುತ್ತಾರೆ. ಚುನಾವಣೆ ಬಂದಾಗ ನೋಡೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಭಾನುವಾರ ಹೇಳಿದ್ದಾರೆ.

https://publicnext.com/article/nid/Hubballi-Dharwad/Politics/node=621884

4. ರಾ.ಹ ದೇಶಪಾಂಡೆ ಜಯಂತಿ

'ಸಿರಿಗನ್ನಡಂ ಗೆಲ್ಗೆ' ಎಂಬ ಘೋಷವಾಕ್ಯವನ್ನು ನೀಡಿದ ಏಕೀಕರಣ ಹರಿಕಾರ ರಾ.ಹ ದೇಶಪಾಂಡೆ ಅವರ 161ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮ‌ವು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.

https://publicnext.com/article/nid/Hubballi-Dharwad/Cultural-Activity/node=622372

5. ಬಸ್‌ಗಾಗಿ ಪರದಾಟ

ನವಲಗುಂದ ತಾಲೂಕಿನ ಯಮನೂರ ಜಾತ್ರೆ ಹಿನ್ನೆಲೆ ಪಟ್ಟಣದ ಬಸ್ ನಿಲ್ದಾಣಕ್ಕೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು (ಸೋಮವಾರ) ಪ್ರಯಾಣಿಕರು ಗಂಟೆಗಟ್ಟಲೇ ಉರಿ ಬಿಸಿಲಿನಲ್ಲೇ ಕಾಯುವ ದುಸ್ಥಿತಿ ಉಂಟಾಯಿತು.

https://publicnext.com/article/nid/Hubballi-Dharwad/Infrastructure/node=622750

6. ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ- ಚಾಲಕ ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಳಿ ನಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

https://publicnext.com/article/nid/Hubballi-Dharwad/Accident/node=622808

7. ನೈರುತ್ಯ ರೈಲ್ವೇಯಿಂದ ಹೊಸ ದಾಖಲೆ

ಸರಕು ಸಾಗಣೆಯಲ್ಲಿ ನೈರುತ್ಯ ರೈಲ್ವೇಯು ಒಟ್ಟು 38.86 ಮಿಲಿಯನ್ ಟನ್‌ ಲೋಡಿಂಗ್ ಮಾಡುವ ಮೂಲಕ 105 ಕೋಟಿ ರೂಪಾಯಿಗೂ ಅಧಿಕ ಲಾಭಗಳಿಸಿದ್ದು, ಪಾರ್ಸೆಲ್ ಸೇವೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

https://publicnext.com/article/nid/Hubballi-Dharwad/Infrastructure/node=622803

8. ಟಗರು ಕಾಳಗ

ಮಾಜಿ ಸಚಿವ, ದಿ. ಸಿ.ಎಸ್.ಶಿವಳ್ಳಿ ಅವರ ಮೂರನೇ ಪುಣ್ಯಸ್ಮರಣೆ ಅಂಗವಾಗಿ ಯರಗುಪ್ಪಿಯಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಹಮ್ಮಿಕೊಳ್ಳಲಾಗಿದ್ದು, ಇಂದು ಸ್ಪರ್ಧೆಗೆ ಚಾಲನೆ ನೀಡಲಾಯಿತು.

https://publicnext.com/article/nid/Hubballi-Dharwad/Sports/node=622123

Edited By : Nagesh Gaonkar
Kshetra Samachara

Kshetra Samachara

21/03/2022 09:59 pm

Cinque Terre

38.06 K

Cinque Terre

0

ಸಂಬಂಧಿತ ಸುದ್ದಿ