ಕುಂದಗೋಳ: ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿಯವರ ಮೂರನೇ ಪುಣ್ಯಸ್ಮರಣೆ ಅಂಗವಾಗಿ ಯರಗುಪ್ಪಿಯಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಆರಂಭಗೊಂಡಿದೆ.
ತಮ್ಮ ಬದುಕಿನ ಅವಧಿಯಲ್ಲಿ ಸದಾ ಒಂದಿಲ್ಲೊಂದು ಗ್ರಾಮೀಣ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ಮಾಜಿ ಸಚಿವ ಸಿ.ಎಸ್.ಶಿವಳ್ಳಿಯವರ ಸ್ಮರಣಾರ್ಥವಾಗಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಾಗೂ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಟಗರು ಕಾಳಗ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಕ್ರೀಡಾ ಪ್ರೇಮಿಗಳು ತಮ್ಮ ತಮ್ಮ ಟಗರುಗಳನ್ನು ಸ್ಪರ್ಧೆಗೆ ತಂದಿದ್ದಾರೆ. ಯರಗುಪ್ಪಿಯಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಸಾರ್ವಜನಿಕರೂ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡು ಕಾಳಗ ವೀಕ್ಷಿಸುತ್ತಿದ್ದಾರೆ.
ಟಗರುಗಳು ಪ್ರಶಸ್ತಿ ಸುತ್ತಿಗಾಗಿ ಸೆಣಸಾಡುವ ದೃಶ್ಯಾವಳಿ ಮೈ ನವಿರೇಳಿಸುತ್ತಿವೆ.
Kshetra Samachara
20/03/2022 08:43 pm