ಹುಬ್ಬಳ್ಳಿ: ಆರ್.ಕೆ.ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಾಗೂ ಹೆಚ್.ಸಿ.ಜಿ ಎನ್ ಎಮ್.ಆರ್ ಕ್ಯಾನ್ಸರ್ ಸೆಂಟರ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಆಯೋಜಿಸಲಾದ "ಆರೋಗ್ಯ ನಡಿಗೆ(Walk for health)"ಫ್ರೀ ಸ್ಟೈಲ್ ವಾಕಿಂಗ್ ಸ್ಪರ್ಧೆಯು ರವಿವಾರ ಮುಂಜಾನೆ ಉಣಕಲ್ ಕೆರೆಯ ಆವರಣದಲ್ಲಿ ನಡೆಯಿತು.
ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಪರಿಣಾಮಕಾರಿಯಾದ ಹಾಗೂ ಮಧುಮೇಹ, ರಕ್ತದೊತ್ತಡ ದಂತಹ ರೋಗಗಳನ್ನು ಬರದಂತೆ ತಡೆಗಟ್ಟಲು ನಡಿಗೆ ಅವಶ್ಯಕ ಆಗಿದ್ದು ಸಾರ್ವಜನಿಕರಲ್ಲಿ ವಾಕಿಂಗ್ ಮಾಡುವುದನ್ನು ಉತ್ತೇಜಿಸಲು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಸ್ಪರ್ಧೆಯ ಆಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸ್ಪರ್ಧೆಯಲ್ಲಿ ಮಹಿಳೆಯರಿಗಾಗಿ ಹಾಗೂ ಪುರುಷರಿಗಾಗಿ ಒಟ್ಟು ಏಳು ವರ್ಗಗಳು ಇದ್ದು ಪ್ರತಿ ವರ್ಗದಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರಮೇಶ್ ಕಾಂಬಳೆ, ವೈದ್ಯರಾದ ಅಬ್ದುಲ್ ರಹೀಮ್, ರಂಗನಗೌಡ ಚಿಕ್ಕನಗೌಡ್ರ್, ಮಂಜಣ್ಣ ಹೊಸಮನಿ, ಕಿರಣ ಪವಾರ, ಜಯಂತ್ ಉಡುಪಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
Kshetra Samachara
09/12/2024 07:33 pm