ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಒಂದು ಕೈ ಇಲ್ಲದಿದ್ದರೇನು… ಛಲ ಇದೆಯಲ್ಲ, ವರ್ಲ್ಡ್ ಒಲಿಂಪಿಕ್‌ನಲ್ಲಿ ಸಾಧನೆಗೆ ಸಜ್ಜಾದ ಹುಬ್ಬಳ್ಳಿ ಯುವಕ

ಹುಬ್ಬಳ್ಳಿ: ಒಬ್ಬ ಯುವಕ ಏನಾದ್ರು ಒಂದು ಸಾಧನೆ ಮಾಡಬೇಕೆಂದು ಪಣ ತೊಟ್ಟರೆ, ಅದೆಷ್ಟೇ ಅಡಚಣೆ ಇದ್ರೂ ಯಾವುದಕ್ಕೂ ಲೆಕ್ಕಿಸದೆ ತನ್ನ ಗುರಿಯನ್ನು ಮುಟ್ಟುತ್ತಾನೆ. ಆದ್ರೆ ನಮ್ಮ ಹುಬ್ಬಳ್ಳಿಯ ಯುವಕನೊಬ್ಬನ ಸಾಧನೆ ನೋಡಿದ್ರೆ ಎಲ್ಲರೂ ಹುಬ್ಬೇರುವಂತದ್ದು. ಒಂದು ಕೈ ಇಲ್ಲದಿದ್ರೂ ಕೂಡ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಮೂರು ಗೋಲ್ಡ್ ಮೆಡಲ್‌ ಗಳನ್ನು ತನ್ನ ಮಡಿಗೇರಿಸಿಕೊಂಡಿದ್ದಾನೆ.

ಎಸ್,,, ಹುಬ್ಬಳ್ಳಿಯ ಸೆಟ್ಲಿಮೆಂಟ್ ನಿವಾಸಿಯಾದ ಸಿದ್ದಾರ್ಥ ಮಂಜುನಾಥ ಬಳ್ಳಾರಿ, ತನ್ನ 18 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಸಾಧನೆ ಮಾಡಿ ನಮ್ಮ ಭಾರದ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾನೆ. ಸಿದ್ದಾರ್ಥ ಸ್ಟೋರಿ ನೋಡಿದರೆ ನಿಮಗೆ ಕಣ್ಣಂಚಲ್ಲಿ ನೀರಿನ ಜೊತೆಗೆ ಆತನ ಸಾಧನೆ ಬಗ್ಗೆ ಹೆಮ್ಮೆ ಅನಿಸುತ್ತೆ. ಏನಪ್ಪ ಮೂರು ಗೋಲ್ಡ್ ಮೆಡಲ್ ಹಾಕಿಕೊಂಡು ನಿಂತಿದ್ದಾನೆ, ಒಂದು ಕೈ ಸಹ ಇಲ್ಲ ಅಂತ ನೋಡ್ತಾ ಇದೀರಾ..?? ಹೌದು ನಮ್ಮ ನಿಮ್ಮಂತೆ ಆತನು ಕೂಡ ಮೊದಲು ಎಲ್ಲ ಅಂಗಾಂಗಳನ್ನ ಹೊಂದಿದ್ದ ಸಿದ್ದಾರ್ಥ, ಆದ್ರೆ ಅವನ ಜೀವನದಲ್ಲಿ ಆದ ಘಟನೆಯಿಂದ ಕೈ ಕಳೆದುಕೊಳ್ಳಬೇಕಾಯಿತು. ಆ ಸ್ಟೋರಿ ಕೇಳಿದರೆ ನಿಜಕ್ಕೂ ಕರುಳು ಹಿಂಡುವಂತದ್ದು.

ಸಿದ್ದಾರ್ಥ ಒಬ್ಬ ಹಾಕಿ ಆಟಗಾರ ಹಾಕಿಯಲ್ಲಿ ತನ್ನ ಭವಿಷ್ಯ ಕಟ್ಟಿಕೊಳ್ಳಬೇಕೆಂಬ ಮಹದಾಸೆ ಹೊಂದಿದ್ದ. ಕಠಿಣ ಪರಿಶ್ರಮದಿಂದ ಹಾಕಿ‌ ಅಭ್ಯಾಸವನ್ನ ಮಾಡುತ್ತಿದ್ದ. ಆದರೆ ಸಿದ್ದಾರ್ಥನ ಜೀವನದಲ್ಲಿ ನಡೆದಿದ್ದೆ ಬೇರೆ. ವಿದ್ಯುತ ತಗುಲಿದ ಪರಿಣಾಮ ತನ್ನ ಎಡಗೈಯನ್ನೆ ಕಳೆದುಕೊಂಡು ತೀವ್ರವಾಗಿ ಗಾಯಗೊಂಡಿದ್ದ. ಎಡಗೈ‌ ಮತ್ತು ತೊಡೆಭಾಗ ಸೇರಿದಂತೆ 25 ಆಪರೇಷನ್ ಹಾಗೂ 6000 ಕ್ಕಿಂತ ಹೆಚ್ಚು ಹೊಲಿಗೆಯನ್ನು ಸಿದ್ದಾರ್ಥ ದೇಹದಲ್ಲಿ ಹಾಕಲಾಗಿದೆ.

ಈ ಎಲ್ಲ ನೋವು, ಎಡಗೈ ಕಳೆದುಕೊಂಡರು ಸಹ ಛಲ ಬಿಡದ ಸಿದ್ದಾರ್ಥ ಇತ್ತೀಚಿಗೆ ಥೈಲ್ಯಾಂಡ್ ನ ಕೋರಟ್ ನಲ್ಲಿ ನಡೆದ ವರ್ಲ್ಡ್ ಎಬಿಲಿಟಿ ಯೂಥ್ ಗೇಮ್ ನಲ್ಲಿ 100 ಮೀ, 200 ಮೀ ಮತ್ತು ಲಾಂಗ್ ಜಂಪ್ ನಲ್ಲಿ ಗೋಲ್ಡ್ ಮೆಡಲ್ ತನ್ನ ಮುಡಿಗೇರಿಸಿಕೊಂಡಿದ್ದಾನೆ.

ಇನ್ನು ಇಷ್ಟೆಲ್ಲ ಸಾಧನೆ ಮಾಡಿದ ಸಿದ್ದಾರ್ಥನಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವುದೇ ಸಹಾಯಹಸ್ತ ದೊರೆತಿಲ್ಲ. ತಂದೆಯ ಪಿಎಫ್ ಹಣ ತೆಗೆದುಕೊಂಡು, ಬೇರೆಡೆಗೆ ಸಾಲ ಮಾಡಿ ಆತನ ಖರ್ಚು ವೆಚ್ಚ ಭರಿಸಲಾಗಿದೆ. ಮಗನ ಸಾಧನೆಯ ಖುಷಿ ಒಂದೆಡೆ ಆದರೆ ಪ್ರತಿಭಾವಂತ ಕ್ರೀಡಾಪಟುವಿಗೆ ದೊರಯಬೇಕಾದ ಸೌಲಭ್ಯ ದೊರೆತಿಲ್ಲ. ಸಿದ್ದಾರ್ಥನ ಸಾಧನೆ ನೋಡಿದ ದಲಿತ ಸಂಘಟನೆಗಳು ಹುಬ್ಬಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿದ್ದಾರ್ಥನಿಗೆ ಅಭಿನಂದನೆ ಸಲ್ಲಿಸಿದರು. ಮಗನ ಸಾಧನೆ ಬಗ್ಗೆ ಪಾಲಕರು ಹೇಳಿದ್ದು ಹೀಗೆ.

ಇನ್ನು ಸಿದ್ದಾರ್ಥ ಹೀಗೆ ಸಾಧನೆ ಮಾಡಲು ಅವನ ಪರಿಶ್ರಮ ಸಾಕಷ್ಟು ಇದೆ. ದಿನಕ್ಕೆ ಐದು ತಾಸುಗಳ ಕಾಲ ಪ್ರ್ಯಾಕ್ಟೀಸ್ ಮಾಡ್ತಿದ್ದ. ರಾಜ್ಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಗೆಲವು ಸಾಧಿಸಿ ಅದೆಷ್ಟೋ ಮೆಡಲ್‌ಗಳನ್ನು ಪಡೆದಿದ್ದಾನೆ. ಈ ಯುವಕನ ಗುರಿ ವರ್ಲ್ಡ್ ಒಲಂಪಿಕ್ ನಲ್ಲೆ ಭಾಗವಹಿಸಿ ಭಾರತಾಂಬೆಯ ಹೆಸರನ್ನು ಅಂಚಿನಲ್ಲಿ ಬರೆಸಬೇಕೆಂದು ಗುರಿ ಹೊಂದಿದ್ದಾನೆ. ಇನ್ನಾದರೂ ಸರಕಾರ ಜನಪ್ರತಿನಿಧಿಗಳು ಪ್ರತಿಭಾವಂತ ಕ್ರೀಡಾಪಟುವಿಗೆ ಸಹಾಯಹಸ್ತ ನೀಡಿ ಮತ್ತಷ್ಟು ಸಾಧನೆಗೆ ಬೆಂಬಲ ನೀಡಬೇಕಾಗಿದೆ. ಸಿದ್ದಾರ್ಥನ ಮುಂದಿನ ಸಾಧನೆಗೆ ಹುಬ್ಬಳ್ಳಿ ಧಾರವಾಡ ಮಂದಿ, ಪಬ್ಲಿಕ್ ನೆಕ್ಸ್ಟ್ ವತಿಯಿಂದ ಶುಭವಾಗಲಿ.

ಈರಣ್ಣ ವಾಲಿಕಾರ, ಪಬ್ಲಿಕ್ ‌ನೆಕ್ಸ್ಟ್ ಹುಬ್ಬಳ್ಳಿ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/12/2024 02:51 pm

Cinque Terre

27.05 K

Cinque Terre

6

ಸಂಬಂಧಿತ ಸುದ್ದಿ