ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರೋ ಚಾಂಗದೇವ ಜಾತ್ರೆ ಆರಂಭ !

ನವಲಗುಂದ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಕೈನ್ನಡಿಯಂತಿರುವ ಧಾರ್ಮಿಕ ಕ್ಷೇತ್ರ ಯಮನೂರ ರಾಜಾಬಾಗ ಸವಾರ ಊರ್ಫ್ ಚಾಂಗದೇವ ಮಹಾರಾಜರ ಜಾತ್ರೆ ಶನಿವಾರದಿಂದ ಆರಂಭಗೊಂಡಿದ್ದು, ಸುಮಾರು ಒಂದು ತಿಂಗಳವರೆಗೆ ಜರುಗಲಿದೆ.

ಜಾತ್ರೆ ನಿಮಿತ್ತ ಹಬ್ಬದ ವಾತವರಣ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದು, ರಾಜ್ಯ, ಹೊರ ರಾಜ್ಯದಿಂದ ಜಾತಿ, ಭೇದವಿಲ್ಲದೇ ಭಕ್ತರು ಆಗಮಿಸುತ್ತಿದ್ದಾರೆ. ಯಮನೂರ ಗ್ರಾಮದ ಹತ್ತಿರ ಹರಿಯುವ ಬೆಣ್ಣಿಹಳ್ಳದ ನೀರು ಚರ್ಮ ರೋಗ ನಿವಾರಕವಾಗಿದೆ ಎಂಬ ನಂಬಿಕೆ ಇರುವುದರಿಂದ, ಜಾತ್ರೆಗೆ ಆಗಮಿಸುವ ಭಕ್ತರು ಹಳ್ಳದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ತಮ್ಮ ಕುಟುಂಬದವರಿಗೆ ಹಳ್ಳದ ನೀರು ತೆಗೆದುಕೊಂಡು ಹೋಗುತ್ತಾರೆ.

ಇದೇ ತಿಂಗಳ 19 ರಿಂದ ಆರಂಭವಾದ ಜಾತ್ರೆ 25 ರವರೆಗೆ ಜರುಗಲಿದೆ. ಮಾರ್ಚ್ 21 ನೇ ತಾರೀಕಿನಂದು ಮಹಾತ್ಮರ ಗಂಧ ಹಾಗೂ 22 ನೇ ತಾರೀಕಿನಂದು ಮುಖ್ಯ ಉರುಸ್ ಜರುಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬ್ಯಾರಿಕೆಡ್ ಮೂಲಕ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Edited By : Manjunath H D
Kshetra Samachara

Kshetra Samachara

20/03/2022 07:30 pm

Cinque Terre

34.97 K

Cinque Terre

7

ಸಂಬಂಧಿತ ಸುದ್ದಿ