ಧಾರವಾಡ: 'ಸಿರಿಗನ್ನಡಂ ಗೆಲ್ಗೆ' ಎಂಬ ಘೋಷವಾಕ್ಯವನ್ನು ನೀಡಿದ ಏಕೀಕರಣ ಹರಿಕಾರ ರಾ.ಹ ದೇಶಪಾಂಡೆ ಅವರ 161ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮವನ್ನು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ರಾ.ಹ ದೇಶಪಾಂಡೆ ಅವರ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಅಮೃತ ದೇಸಾಯಿ, ಮಳೆಪ್ಪಜ್ಜ ಮಠದ ಸಂಗಮೇಶ ದೇವರು ಸೇರಿದಂತೆ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೂಲತಃ ನರೇಂದ್ರ ಗ್ರಾಮದವರೇ ಆದ ರಾ.ಹ ದೇಶಪಾಂಡೆ 1862ರಲ್ಲಿ ಜನಿಸಿದರು. ಮುಂಬೈ ಕರ್ನಾಟಕ ಭಾಗದಲ್ಲೇ ಮೊಟ್ಟಮೊದಲ ಬಾರಿಗೆ ಎಂ.ಎ ಪದವಿ ಪಡೆದ ಕನ್ನಡಿಗ ಇವರಾಗಿದ್ದರು. ಕರ್ನಾಟಕ ಏಕೀಕರಣ ಚಳವಳಿಯ ಭಾಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಸದ್ಯ ಅವರ ಹುಟ್ಟೂರಿನಲ್ಲಿ ಸ್ಮರಣ ಕಾರ್ಯಕ್ರಮ ಆಯೋಜಿಸಿದ್ದು ಅರ್ಥಪೂರ್ಣ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಸಂಜೀವ್ ಕುಲಕರ್ಣಿ ಹೇಳಿದರು..
ಇನ್ನು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ರಾ.ಹ ದೇಶಪಾಂಡೆ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ತುರಮರಿ ಸಂತಸ ಹಂಚಿಕೊಂಡರು..
Kshetra Samachara
21/03/2022 08:48 am