ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾರ್ತಿಕ ಮಾಸದ ಕೊನೆಯ ದಿನ ಬೆಳಗಿದವು ಸಾಲು ಸಾಲು ತುಪ್ಪದ ದೀಪ

ಧಾರವಾಡ: ಕಾರ್ತಿಕ ಮಾಸದ ಕೊನೆಯ ದಿನವಾದ ಸೋಮವಾರ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಪರ್ವತ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಾಡ್ಯಮಿಯಂದು ಕಾರ್ತಿಕೋತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಹೆಣ್ಣು ಮಕ್ಕಳೆಲ್ಲ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ದೇವಸ್ಥಾನ ಕಮಿಟಿಯವರು ತುಪ್ಪದ ದೀಪಗಳನ್ನು ನೀಡಿದರು.

ಮಂಗಳಾರತಿಯಾದ ನಂತರ ಎಲ್ಲ ಹೆಣ್ಣು ಮಕ್ಕಳು ತುಪ್ಪದ ದೀಪಗಳನ್ನು ಬೆಳಗಿ ಕಾರ್ತಿಕೋತ್ಸವದ ಮೆರುಗು ಹೆಚ್ಚಿಸಿದರು. ಗ್ರಾಮದ ಹಿರಿಯರು ಹಾಗೂ ದೇವಸ್ಥಾನ ಕಮಿಟಿಯವರು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡರು.

Edited By : Vinayak Patil
Kshetra Samachara

Kshetra Samachara

02/12/2024 10:11 pm

Cinque Terre

44.16 K

Cinque Terre

0

ಸಂಬಂಧಿತ ಸುದ್ದಿ