ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಂಗ್ಲಾದೇಶದಲ್ಲಿ ಸಾರ್ವಜನಿಕವಾಗಿ ಕೇಸರಿ ಬಟ್ಟೆ ತಿಲಕ ಧರಿಸಬೇಡಿ - ಇಸ್ಕಾನ್ ವಕ್ತಾರ ಸಲಹೆ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಮಧ್ಯೆ, ಇಸ್ಕಾನ್ ಕೋಲ್ಕತ್ತಾ ವಕ್ತಾರ ರಾಧಾರಾಮ್ ದಾಸ್ ಮಂಗಳವಾರ ನೆರೆಯ ದೇಶದ ಸನ್ಯಾಸಿಗಳು ಮತ್ತು ಅನುಯಾಯಿಗಳನ್ನ ಸಾರ್ವಜನಿಕವಾಗಿ ಕೇಸರಿ ಬಟ್ಟೆ ಮತ್ತು ತಿಲಕವನ್ನ ಧರಿಸದಂತೆ ಒತ್ತಾಯಿಸಿದ್ದಾರೆ.

“ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ. ನಮಗೆ ಕರೆ ಮಾಡುತ್ತಿರುವ ಸನ್ಯಾಸಿಗಳು ಮತ್ತು ಭಕ್ತರು ಇಸ್ಕಾನ್ ಅನುಯಾಯಿಗಳು ಅಥವಾ ಸನ್ಯಾಸಿಗಳು ಎಂದು ತಮ್ಮ ಗುರುತನ್ನ ಸಾರ್ವಜನಿಕವಾಗಿ ಮರೆಮಾಚಲು ಹೇಳಿದ್ದೇವೆ. ಮನೆಗಳಲ್ಲಿ ಅಥವಾ ದೇವಾಲಯಗಳಲ್ಲಿ ತಮ್ಮ ನಂಬಿಕೆಯನ್ನು ಬುದ್ಧಿವಂತಿಕೆಯಿಂದ ಆಚರಿಸಲು ನಾವು ಅವರನ್ನ ಸೂಚಿಸಿದ್ದೇವೆ. ಗಮನ ಸೆಳೆಯದ ರೀತಿಯಲ್ಲಿ ಉಡುಪು ಧರಿಸುವಂತೆ ನಾವು ಅವರಿಗೆ ಸಲಹೆ ನೀಡಿದ್ದೇವೆ” ಎಂದು ಇಸ್ಕಾನ್ ಕೋಲ್ಕತಾ ಉಪಾಧ್ಯಕ್ಷರೂ ಆಗಿರುವ ದಾಸ್ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

03/12/2024 06:32 pm

Cinque Terre

94.51 K

Cinque Terre

7

ಸಂಬಂಧಿತ ಸುದ್ದಿ