ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ಪುಟಗಳೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಎದರು ನೋಟಿಸ್ ಗೆ ಉತ್ತರ ನೀಡಿದ ಯತ್ನಾಳ್..!

ಕೇಂದ್ರ ಬಿಜೆಪಿ ಶಿಸ್ತು ಸಮಿತಿಯ ಮುಂದೆ ಬಸನಗೌಡ ಪಾಟೀಲ್ ಯತ್ನಾಳ್ ನೋಟಿಸ್ ಗೆ ಉತ್ತರ ನೀಡಿದ್ದಾರೆ‌. ಇಂದು ನವದೆಹಲಿಯಲ್ಲಿ ಕೇಂದ್ರ ಶಿಸ್ತು ಸಮಿತಿ ಎದರು ಹಾಜರಾಗಿ 6 ಪುಟಗಳೊಂದಿಗೆ ಒಂದುಗಂಟೆಗೂ ಕಾಲ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಎದುರು ನೋಟಿಸ್ ಗೆ ಉತ್ತರ ನೀಡಿದ್ದಾರೆ. ಶಿಸ್ತು ಸಮಿತಿ ಎದುರು ಹಾಜರಾದ ಬಳಿಕ ನವದೆಹಲಿಯಲ್ಲಿ ಮಾತನಾಡಿದ ಅವರು, ಒಂದು ಕಾಲ್ ಗಂಟೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ ನನ್ನ ಹೇಳಿಕೆಯನ್ನ ಅವರು ಸ್ವೀಕಾರ ಮಾಡಿದ್ದಾರೆ ಮುಂದಿನ ವಿಚಾರವನ್ನ ತಿಳಿಸುತ್ತೇನೆ ಎಂದಿದ್ದಾರೆ.ರಾಜ್ಯದ ಪಕ್ಷದ ವಿಚಾರವನ್ನ ವಿವರವಾಗಿ ಹೇಳಿದ್ದೇನೆ ಅವರು ನನ್ನ ವಿವರಣೆಯನ್ನ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರ ಶಿಸ್ತು ಸಮಿತಿ ನಮ್ಮ‌ವಕ್ಫ್ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು, ಹಿಂದುತ್ವ, ವಕ್ಫ್ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಟ ಮುಂದುವರೆಸಿಕೊಂಡು ಹೋಗಿ ನೀವು ಒಳ್ಳೆಯ ಹೋರಾಟ ಮಾಡುತ್ತಿದ್ದೀರಾ ಹಾಗೇ ಮುಂದುವರೆಸಿಕೊಂಡು ಹೋಗಿ ಹಾಗೇ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೆಚ್ಚು ಆಧ್ಯತೆ ಕೊಡಬೇಡಿ ಎಂದಿದ್ದಾರೆ. ಪಕ್ಷದ ಆಂತರಿಕ ವಿಚಾರವನ್ನ ಹೊರಗಡೆ ಮಾತನಾಡಬೇಡಿ ಏನಾದರೂ ಇದ್ರೆ ಪಕ್ಷದ ಅಧ್ಯಕ್ಷರ ಗಮನಕ್ಕೆ ತನ್ನಿ ಎಂದು ತಿಳಿಸಿದ್ದಾರೆ.ಬಿಎಸ್ ವೈ ಕುಟುಂಬದ ಹೀಗೆ ತಮ್ಮ ಹೋರಾಟ ಮುಂದುವರೆಯಲಿದ್ಯಾ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ಯತ್ನಾಳ್ ಒಳಗಡೆ ಏನ್ ಹೇಳಿದ್ದಾರೆ ಅದನ್ನ ಮನಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡ್ತೀನಿ ನಮ್ಮ ಭಾವನೆಯನ್ನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದಿದ್ದಾರೆ

ಎಂದು ತಿಳಿಸಿದರು.

Edited By : Suman K
PublicNext

PublicNext

04/12/2024 06:18 pm

Cinque Terre

17.28 K

Cinque Terre

0

ಸಂಬಂಧಿತ ಸುದ್ದಿ