ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದ ಪೋಸ್ಟ್ ಹಾಕಿದ ಬೆನ್ನಲ್ಲೇ ಕನ್ನಡಿಗರಿಂದ ವಿರೋಧ

ನ್ಯಾಷನಲ್ ಅವಾರ್ಡ್ ವಿನ್ನರ್ ನಟ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್‌ ನಲ್ಲಿ ನಟಿಸೋದಾಗಿ ಅನೌನ್ಸ್ ಮಾಡಿ ಪೋಸ್ಟ್ ಹಾಕಿದ ಬೆನ್ನಲ್ಲೇ ಕನ್ನಡಿಗರಿಂದ ವಿರೋಧ ಶುರುವಾಗಿದ್ದು ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನು ಅಂತ ಪ್ರಶ್ನಿಸಿ ಫ್ಯಾನ್ಸ್ ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.

ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆ್ಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ರಿಷಬ್ ಸಿನಿಮಾ ಪೋಸ್ಟರ್ ಹಂಚಿಕೊಂಡ ಬೆನ್ನಲ್ಲೇ ಕೆಲ ಕನ್ನಡಿಗರಿಂದ ಅಸಮಾಧಾನ ವ್ಯಕ್ತವಾಗಿದೆ

ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರನ್ನು , ಕುಮಟಾವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು. ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ ಪ್ರಸಿದ್ಧಿ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ ಎಂದು ಅಭಿಮಾನಿಯೊಬ್ಬ ಎಕ್ಸ್‌ನಲ್ಲಿ ರಿಷಬ್‌ಗೆ ಪ್ರಶ್ನಿಸಿದ್ದಾರೆ.

ಶಿವಾಜಿ ಮಹಾರಾಜ್ ಕುರಿತ ಈ ಸಿನಿಮಾವನ್ನು ಕೈಬಿಡಿ ಎಂದು ರಿಷಬ್‌ಗೆ ಅನೇಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಕನ್ನಡಿಗರು ರಿಷಬ್ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕೆಲ್ಲಾ ಶೆಟ್ರು ಉತ್ತರ ನೀಡುತ್ತಾರಾ? ಸ್ಪಷ್ಟನೆ ಕೊಡುತ್ತಾರಾ? ಎಂದು ಕಾದು ನೋಡಬೇಕಿದೆ.

Edited By : Suman K
PublicNext

PublicNext

04/12/2024 05:11 pm

Cinque Terre

45.33 K

Cinque Terre

22

ಸಂಬಂಧಿತ ಸುದ್ದಿ