ಸ್ಯಾಂಡಲ್‌ವುಡ್ ಕ್ವೀನ್ ಮೋಹಕತಾರೆ ರಮ್ಯಾ ಅವರ ಹುಟ್ಟುಹಬ್ಬದ ಹಿನ್ನೆಲೆ ಆಫ್ರಿಕಾಗೆ ತೆರಳಿದ್ರು. ಅಲ್ಲಿನ ಸುಂದರ ಜಾಗಗಳಿಗೆ ನಟಿ ಭೇಟಿ ನೀಡಿದ್ದು ಜೊತೆಗೆ ಬುಡಕಟ್ಟು ಮಹಿಳೆಯರ ಜೊತೆ ನಟಿ ಹೆಜ್ಜೆ ಹಾಕಿದ್ದಾರೆ. ಈ ಕುರಿತ ಪೋಸ್ಟ್‌ವೊಂದನ್ನು ನಟಿ ಶೇರ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಫ್ರಿಕಾದಲ್ಲಿ ರಮ್ಯಾ ಜನ್ಮದಿನವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಅಲ್ಲಿನ ಹುಲಿ, ಆನೆ, ಸಿಂಹ, ಜಿರಾಫೆ ಹೀಗೆ ನಾನಾ ಪ್ರಾಣಿಗಳ ಫೋಟೋವನ್ನು ಸುಂದರವಾಗಿ ತೆಗೆದಿದ್ದಾರೆ . ಅದರಲ್ಲಿ ಬಹಳ ವಿಶೇಷವಾಗಿ ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ರಮ್ಯಾ ನೃತ್ಯ ಮಾಡಿದ್ದು ಜೊತೆಗೆ ಬುಡಕಟ್ಟು ಮಹಿಳೆಯರು ಕೆಂಪು ಬಣ್ಣದ ಉಡುಪು ತೊಟ್ಟಿದ್ರು. ರಮ್ಯ ಖುಷಿಯಿಂದಲೇ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಇದೀಗ ಈ ನೃತ್ಯ ಅಭಿಮಾನಿಗಳ ಗಮನ ಸೆಳೆದಿದೆ.
PublicNext
04/12/2024 07:35 pm