ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಮನೆಯಲ್ಲಿ 'ಮಂಜು'ಗೆ ಜೀರೋ ಈಗೋ ಅಂತೆ - ಗೌತಮಿ

ಬಿಗ್ ಬಾಸ್ ಮನೆಯಲ್ಲಿ ಎರಡು ವಾಹಿನಿಯಲ್ಲಿ ಯಾರು ಕಳಪೆ ಎಂದು ಘೋಷಿಸಬೇಕಿತ್ತು ಅದರಲ್ಲಿ ಧನರಾಜ್ ಆಚಾರ್ ಒಡೆತನದ ವಾಹಿನಿಯು ಎದುರಾಳಿ ವಾಹಿನಿಯ 'ಉಗ್ರಂ' ಮಂಜು ಅವರನ್ನು ಕಳಪೆ ಎಂದು ಘೋಷಿಸಿತು.

ಮಂಜು ಅವರು ಕಳಪೆ ಅಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಗೌತಮಿ. ನನ್ನ ಪ್ರಕಾರ ಈ ಶೋಗೆ ರೆಡಿಮೇಡ್‌ ಸ್ಪರ್ಧಿ ಎಂದರೆ ಅದು ಮಂಜು ಎಲ್ಲಾ ಕಡೆಗಳಲ್ಲೂ ಕಾಣಿಸಿಕೊಂಡಿದ್ದಾರೆ ಎಂದು ಸಮರ್ಥನೆಗಿಳಿದರು.

ಸ್ಟ್ರಾಟೆಜಿ ಕಿಂಗ್.. ಗ್ರೇ ಏರಿಯಾ ಕಿಂಗ್.. ಗೇಮ್ ಚೇಂಜರ್‌.. ಇಂಥ ಟೈಟಲ್‌ಗಳು ಮಂಜುಗೆ ಸಿಕ್ಕಿವೆ. ಆದರೆ ಇಂತಹ ಟೈಟಲ್‌ಗಳ ಜೊತೆಗೆ ಕಳಪೆ ಅನ್ನೋ ಟೈಟಲ್ ಮ್ಯಾಚ್ ಆಗೋದೇ ಇಲ್ಲ ಅಂತ ಅನ್ನಿಸುತ್ತದೆ. ಈ ಮನೆಯಲ್ಲಿ ಕಿಚ್ಚನ ಚಪ್ಪಾಳೆಯನ್ನು ಮಂಜು ಅವರು ಪಡೆದುಕೊಂಡಿದ್ದಾರೆ" ಎಂದು ಗೌತಮಿ ಹೇಳಿದ್ದಾರೆ.

ಮಂಜುಗೆ ತಾನು ಮಾಡಿದ್ದು ಸರಿ, ಬೇರೆಯವರು ಮಾಡಿದ್ರೆ ತಪ್ಪು ಅನ್ನೋ ಭಾವನೆ ಇದೆ" ಎಂದು ಪ್ರಶ್ನೆ ಮಾಡಲಾಯಿತು. ಅದಕ್ಕೆ ಸಮರ್ಥನೆ ಆರಂಭಿಸಿದ ಗೌತಮಿ, "ನಾನು ಮಾಡಿದ್ದೇ ಸರಿ ಎಂಬ ಮಂಜಣ್ಣನ ವರ್ತನೆಯನ್ನು ನಾನೆಲ್ಲೂ ಕಂಡಿಲ್ಲ. ಯಾಕೆಂದರೆ, ಮಂಜಣ್ಣನ ತಪ್ಪುಗಳನ್ನು ಸರಿ ಮಾಡುವವಳು ನಾನೇ. ಮಂಜಣ್ಣ ಜೀರೋ ಈಗೋ ಇರುವವರು ಎಂದರು ಗೌತಮಿ. ಒಟ್ಟಿನ್ನಲ್ಲಿ ಮಂಜುವನ್ನು ಗೌತಮಿ ಮಾತ್ರ ಸರಿಯಾಗಿ ಬಲೆಗೆ ಹಾಕಿಕೊಂಡಿದ್ದಾರೆ . ಇವರಿಬ್ಬರ ಬಿಗ್ ಬಾಸ್ ಮನೆಯ ಗೆಳೆತನ ಎಲ್ಲಿಯವರೆಗೆ ಬಂದು ತಲುಪುತ್ತದೆ ಎಂದು ಕಾದು ನೋಡಬೇಕಾಗಿದೆ.

Edited By : Suman K
PublicNext

PublicNext

04/12/2024 03:59 pm

Cinque Terre

30.11 K

Cinque Terre

1