ಬೆಂಗಳೂರು: ಜನರ ನಡುವೆ ಬೆಂಕಿ ಹಚ್ಚುವುದು, ಒಡಕು ತರುವುದೇ ಕಾಂಗ್ರೆಸ್‌ನ ಬ್ರ್ಯಾಂಡ್ ಎಂದು ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ದೇಶವನ್ನು ಚೂರು ಮಾಡಿ ಮಿನಿ ಪಾಕಿಸ್ತಾನ ನಿರ್ಮಿಸುವುದು ಕಾಂಗ್ರೆಸ್‌ನ ಉದ್ದೇಶ. ಅದಕ್ಕಾಗಿ ಮಠ ಮಂದಿರಗಳ, ರೈತರ ಜಮೀನು ಲೂಟಿ ಮಾಡಲಾಗುತ್ತಿದೆ. ಜನರ ನಡುವೆ ಬೆಂಕಿ ಹಚ್ಚುವ ಹಾಗೂ ಒಡಕು ಮೂಡಿಸುವ ಕೆಲಸವನ್ನು ಬ್ರಿಟಿಷರಿಂದ ಕಾಂಗ್ರೆಸ್ಸಿಗರು ಉಡುಗೊರೆಯಾಗಿ ಪಡೆದಿದ್ದಾರೆ. ಇಂತಹ ಕೆಲಸ ಮಾಡುವುದೇ ಅವರ ಬ್ರ್ಯಾಂಡ್ ಎಂದು ಕಿಡಿ ಕಾರಿದರು.
PublicNext
03/12/2024 08:07 pm