ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Exclusive ಕೈಯಲ್ಲಿ ಗನ್ ಬಿಟ್ಟು ಮೈಕ್ ಹಿಡಿದು ಹಾಡಿದ ಕಮಿಷನರ್ ಶಶಿಕುಮಾರ್ : ಹುಚ್ಚೆದ್ದು ಕುಣಿದು ಕಮಿಷನರ್'ಗೆ ಜೈ ಎಂದ ಪೊಲೀಸ್ ಸಿಬ್ಬಂದಿ

ಹುಬ್ಬಳ್ಳಿ : ಅದು ಶಿಸ್ತಿನ ಇಲಾಖೆ ಯಾವಾಗ್ಲೂ ಕ್ರೈಂ,ಕೋರ್ಟು,ಕೇಸು,ಬಂದೋಬಸ್ತ್ ಅಂತಾ ಹಗಲು ರಾತ್ರಿ ಎನ್ನದೇ ಸಾರ್ವಜನಿಕರ ಒಳಿತಿಗಾಗಿ ಶ್ರಮ ವಹಿಸುವ ಇಲಾಖೆ, ಈ ಇಲಾಖೆಯಲ್ಲಿ ಕೆಲ್ಸ್ ಮಾಡೋ ಸಿಬ್ಬಂದಿಗಳು ಮಾತ್ರ ಹಬ್ಬ ಹರಿದಿನಗಳದಂದು ಮನೆಯವರ ಜೊತೆ ಸೇರಿ ಹಬ್ಬ ಮಾಡದೆ ಕರ್ತವ್ಯ ನಿರ್ವಹಿಸಿರೋದನ್ನು ನಾವೆಲ್ಲ ನೋಡಿದ್ದೇವೆ.

ಹೀಗಾಗಿ ಇಂತಹ ಸಿಬ್ಬಂದಿಗಳು ಮತ್ತು ಕುಟುಂಬಸ್ಥರು ಒಂದು ದಿನವಾದ್ರೂ ಖುಷಿಯಿಂದ ಕಾಲ ಕಳೆಯಬೇಕು ಅಂತಾ ಕಮಿಷನರ್ ಶಶಿಕುಮಾರ್ ಪೊಲೀಸ್ ಕುಟುಂಬಗಳಿಗೆಂದೇ ಪೊಲೀಸ್ ವಾರ್ಷಿಕ ಕ್ರೀಡಾಕೂಟದ 2024 ರ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಎಸ್ ಅವಳಿ ನಗರದ ಕಮಿಷನರ್ ಆಗಿ ಎನ್ ಶಶಿಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳುಗಳು ಆಗುತ್ತಲೇ ಬಂತು.ಈ ನಾಲ್ಕು ತಿಂಗಳುಗಳ ಕಾಲ ಕಮಿಷನರ್ ಎನ್ ಶಶಿಕುಮಾರ್ ಕೆಲಸದ ಸ್ಪೀಡ್ ಗೆ ಇಲ್ಲಿನ ಸಿಬ್ಬಂದಿಗಳು ಫುಲ್ ಸುಸ್ತಾಗಿದ್ದರು, ಏರಿಯಾ ಡೊಮಿನೇಷನ್,ಫೆಮಿಲೈರಿಜೇಶನ್,ನೈಟ್ ಪೆಟ್ರೋಲಿಂಗ್,11 ಫೈರಿಂಗ್,ಮಾಡುವುದರ ಮೂಲಕ ಅವಳಿ ನಗರದ ಪೊಲೀಸ್ ಸಿಬ್ಬಂದಿ ಕೆಲ್ಸ್ ಮಾಡಿ ಮಾಡಿ ಸುಸ್ತಾಗಿದ್ದರು.

ಹೀಗಾಗಿ ಇವರನ್ನೆಲ್ಲ ರಿಲ್ಯಾಕ್ಸ್ ಮಾಡುವ ಉದ್ದೇಶದಿಂದ ನಗರದ ಹಳೇ ಸಿ ಆರ್ ಮೈದಾನದಲ್ಲಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮದಲ್ಲಿ ಕಮಿಷನರ್ ಹಾಡಿದ ಕೆಲವು ಹಾಡಿನ ಝಲಕ್ ಇಲ್ಲಿದೆ ನೋಡಿ.

ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿದ್ದ ಕಮಿಷನರ್ ಕೈಯಲ್ಲಿ ಮೈಕ್ ಹಿಡಿದು ನಿರಂತರವಾಗಿ ಒಂದು ಗಂಟೆಗಳ ಕಾಲ ಸಂಗೀತ ಸುಧೆಯನ್ನು ಹರಿಸಿ ಇಲಾಖೆಯ ಸಿಬ್ಬಂದಿಗಳು ಹಾಗೂ ಕುಟುಂಬದವರನ್ನು ರಂಜಿಸಿದರು.ವಿವಿಧ ಕನ್ನಡ ಚಿತ್ರ ಗೀತೆಗಳನ್ನು ಹಾಡಿದ ಕಮಿಷನರ್ ಅವರ ಗಾಯನಕ್ಕೆ ಮನಸೋತ ಡಿಸಿಪಿ ನಂದಗಾವಿ, ರವೀಶ,ಎಸಿಪಿ,ಇನ್ಸ್ಪೆಕ್ಟರ್ ಗಳು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹುಚ್ಚೆದ್ದು ಕುಣಿದು ಒಂದು ದಿನದ ಮಟ್ಟಿಗೆ ಕಮಿಷನರ್ ಜೊತೆ ಸಂತಸದಿಂದ ಕಾಲ ಕಳೆದರು.

ಇದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೊಲೀಸ್ ಕುಟುಂಬದ ಯುವತಿಯೊಬ್ಬಳು ಬೆಸ್ಟ್ ಪೊಲೀಸ್ ಕಮಿಷನರ್ ಅಂತಾ ಖುಷಿಯನ್ನು ಸ್ಟೇಜ್ ಮೇಲೆ ಹಂಚಿಕೊಂಡಿದ್ದು ಹೀಗೆ.

ನಾಲ್ಕೇ ತಿಂಗಳ ಅವಧಿಯಲ್ಲಿ 11 ನಟೋರಿಯಸ್ ಗಳ ಮೇಲೆ ಫೈರಿಂಗ್ ಮಾಡಿ ಫೈರಿಂಗ್ ಸ್ಟಾರ್ ಎಂದು ಹೆಸರುವಾಸಿಯಾಗಿದ್ದ ಕಮಿಷನರ್ ಶಶಿಕುಮಾರ್ ಗನ್ ಬಿಟ್ಟು ಕೈಯಲ್ಲಿ ಮೈಕ್ ಹಿಡಿದು ಸಾಂಗ್ ಹಾಡಿ ಸಿಂಗಿಂಗ್ ಸ್ಟಾರ್ ಕೂಡಾ ಆದ್ರೂ.ಒಟ್ಟಿನಲ್ಲಿ ಅವಳಿ ನಗರದ ಪೊಲೀಸರು ಮಾತ್ರ ಒಂದು ದಿನವಾದ್ರೂ ನಮ್ಮ ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲ ಮಾಡಿಕೊಟ್ಟ ಕಮಿಷನರ್ ಎನ್ ಶಶಿಕುಮಾರ್ ಅವರಿಗೆ ಜೈಕಾರ ಹಾಕಿ ಖುಷಿಯನ್ನು ವ್ಯಕ್ತಪಡಿಸಿದರು.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/12/2024 10:13 am

Cinque Terre

54.08 K

Cinque Terre

24

ಸಂಬಂಧಿತ ಸುದ್ದಿ