ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡ್ರಗ್ಸ್ ಮುಕ್ತ ಹುಬ್ಬಳ್ಳಿ-ಧಾರವಾಡ - ಪೊಲೀಸ್‌ ಕಮಿಷನರ್‌ಗೆ ಸ್ಯಾಂಡಲ್‌ವುಡ್ ನಟರು ಸಾಥ್

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಮಾದಕ ವಸ್ತು ಮುಕ್ತ ಮಾಡುವ ಗುರಿ ಹೊಂದಿರುವ ಪೊಲೀಸ್ ಎನ್‌ ಶಶಿಕುಮಾರ್ ಅವರಿಗೆ ಈಗ ಸ್ಯಾಂಡಲ್‌ವುಡ್ ನಟರು ಸಾಥ್ ನೀಡುತ್ತಿದ್ದಾರೆ.

ಹುಬ್ಬಳ್ಳಿ ಧಾರವಾಡದಲ್ಲಿ ಅದೆಷ್ಟೋ ಯುವಕರು ಮಾದಕ ವಸ್ತುಗಳ ಬಳಸಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಗೂ ಡಿಸಿಪಿಗಳಾದ ರವೀಶ್ ಆರ್, ಮಹಾನಿಂಗ ನಂದಗಾವಿ ಅವರು ಮಾದಕ ವಸ್ತುಗಳ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡತಿದ್ದಾರೆ. ಈಗ ಅವರಿಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಸಾಥ್ ನೀಡಿ ಯುವಕರಲ್ಲಿ ಡ್ರಗ್ಸ್ ಹಾಗೂ ಗಾಂಜಾ ಕುರಿತು ಜಾಗೃತಿ ಮೂಡಿಸಿದ್ದಾರೆ.

ಈಗ ಮತ್ತೊಬ್ಬ ನಟ ಅಂದರೆ ರಿಯಲ್ ಸ್ಟಾರ್ ಉಪೇಂದ್ರ ಸಹ ನಾಳೆ ತಮ್ಮ ಫಿಲ್ಮ್ ಪ್ರಮೋಷನ್ ಜೊತೆಗೆ ಅವಳಿ ನಗರದಲ್ಲಿ ಡ್ರಗ್ಸ್ ಕುರಿತು ಹುಬ್ಬಳ್ಳಿ ಬಿ.ವಿ.ಬಿ ಕಾಲೇಜಿನಲ್ಲಿ ಜಾಗೃತಿ ಮೂಡಿಸಲ್ಲಿದ್ದಾರೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಪೋಷಕರು ಭಾಗಿಯಾಗಿ ಜಾಗೃತಿ ಕಾರ್ಯಕ್ರಮ ಸಕ್ಸಸ್ ಮಾಡಬೇಕು ಎಂದು ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ತಿಳಿಸಿದ್ದಾರೆ. ‌ಅಲ್ಲದೇ ಯಾವುದೇ ಕಾರಣಕ್ಕೂ ಯುವಕರು ಯುವತಿಯರು ಜೀವಕ್ಕೆ ಆಪತ್ತು ಬರುವ ಮಾದಕ ವಸ್ತುಗಳನ್ನ ಬಳಸದೇ ಓದಿನ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

03/12/2024 07:31 pm

Cinque Terre

62.41 K

Cinque Terre

5

ಸಂಬಂಧಿತ ಸುದ್ದಿ