ಹುಬ್ಬಳ್ಳಿ : ನೈಋತ್ಯ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಕು ಮತ್ತು ಪಾರ್ಸೆಲ್ ಸಾರಿಗೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ಸಾಧಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸರಕು ಸಾಗಣೆಯಲ್ಲಿ, ನೈಋತ್ಯ ರೈಲ್ವೆಯು ಒಟ್ಟು 38.86 ಮಿಲಿಯನ್ ಟನ್ ಗಳು (MT) ಲೋಡಿಂಗ್ ಮಾಡುವ ಮೂಲಕ 105 ಕೋಟಿಗೂ ಅಧಿಕ ಲಾಭಗಳಿಸಿದ್ದು, ಪಾರ್ಸಲ್ ಸೇವೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಹೌದು ನೈಋತ್ಯ ರೈಲ್ವೆಯು ಆಟೋಮೊಬೈಲ್ ತಯಾರಕರ ಆಯ್ಕೆಯ ಸಾರಿಗೆಯಾಗಿ ಹೊರಹೊಮ್ಮುತ್ತಿದೆ. ಇಲ್ಲಿಯವರೆಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ 196 ರೇಕ್ ಗಳನ್ನು ಸಾಗಿಸಿದೆ ಇದು ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿದೆ (ಕಳೆದ ಹಣಕಾಸು ವರ್ಷದಲ್ಲಿ 193 ರೇಕ್ ಗಳನ್ನು ಸಾಗಿಸಲಾಗಿತ್ತು). ರೈಲ್ವೆಯು ವಿಶ್ವಾಸಾರ್ಹ, ಹಾನಿ ಮುಕ್ತ ಸಾರಿಗೆಯನ್ನು ನೀಡುವುದರಿಂದ ಹಾಗೂ ರಸ್ತೆಗೆ ಹೋಲಿಸಿದರೆ ಕಡಿಮೆ ಇಂಗಾಲದ ಹೆಜ್ಜೆ ಗುರುತನ್ನು ಹೊಂದಿದೆ.
ಸಕ್ಕರೆಯ ಲೋಡಿಂಗ್ ನಲ್ಲಿ ಇಲ್ಲಿಯವರೆಗೆ 355 ರೇಕ್ ಗಳನ್ನು ಸಾಗಿಸುವ ಮೂಲಕ ಗಣನೀಯ ಪ್ರಗತಿಯನ್ನು ಸಾಧಿಸಿದೆ, ಇದು ಈವರೆಗೆ ಲೋಡ್ ಮಾಡಲಾದ ರೇಕುಗಳಿಗಿಂತ ಅಧಿಕವಾಗಿದೆ. ಸಕ್ಕರೆ, ಪ್ರಾಥಮಿಕವಾಗಿ ಬೆಳಗಾವಿ-ರಾಯಬಾಗ-ಚಿಕೋಡಿ ಪ್ರದೇಶದಿಂದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತದೆ, ಇದರಿಂದ ಕಳೆದ 18ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಕ್ಕರೆ ರೇಕ್ ಸಾಗಾಣಿಕೆ ಮಾಡಿದಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/03/2022 07:55 pm