ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೆರೆ ಅವ್ಯವಸ್ಥೆ ಜನರಿಗೆ ಕಂಟಕ, ಅಧಿಕಾರಿಗಳೇ ಅಭಿವೃದ್ಧಿ ಯಾವಾಗ ?

ಕುಂದಗೋಳ : ಎಲ್ಲೇಡೆ ಅವ್ಯವಸ್ಥೆ, ಸೊಳ್ಳೆಗಳ ಕಾಟ, ದುರ್ನಾತ, ರೋಗದ ಭಯದಿಂದ ಇಲ್ಲೊಂದು ವಠಾರದ ಜನ ಪುರಾತನ ಕೆರೆಗೆ ಕಾಯಕಲ್ಪ ಕಲ್ಪಿಸಿ ಎಂದು ಅಹವಾಲು ಇಟ್ಟಿದ್ದಾರೆ.

ಹೌದು ! ಕುಂದಗೋಳ ಪಟ್ಟಣದಲ್ಲಿ ಜಮಖಂಡಿ ಸಂಸ್ಥಾನದಲ್ಲಿ ನಿರ್ಮಾಣವಾದ ಪುರಾತನ ಅಗಸಿಹೊಂಡದ ಕೆರೆ ಇದೀಗ ಭಯದ ತಾಣವಾಗಿದೆ‌. ಸ್ಥಳೀಯ ಕುಟುಂಬಸ್ಥರು ತಮ್ಮ ಮಕ್ಕಳನ್ನು ಕೆರೆಯತ್ತ ಹೋಗದಂತೆ ಕಾಯುವುದೇ ಒಂದು ಸವಾಲಾಗಿ ಕೆರೆಗೆ ಭದ್ರತೆ ಒದಗಿಸಿ, ಕಾವಲುಗಾರರನ್ನು ನಿಯೋಜಿಸಿ, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕಲ್ಪಿಸಿ, ಸೊಳ್ಳೆಗಳ ಕಾಟಕ್ಕೆ ಫಾಗಿಂಗ್ ವ್ಯವಸ್ಥೆ ಕೈಗೊಳ್ಳಿ ನಮ್ಮ ಆರೋಗ್ಯ ಕಾಪಾಡಿ ಎಂದು ಪರಿ ಪರಿಯಾಗಿ ಪಟ್ಟಣ ಪಂಚಾಯಿತಿಗೆ ಬೇಡಿ ಕೊಂಡಿದ್ದಾರೆ.

ಇನ್ನೂ ಕೆರೆ ಅಕ್ಕಪಕ್ಕದಲ್ಲಿ ಮದ್ಯ ಸೇವಿಸುವವರ ಹಾವಳಿ ಅತಿಯಾಗಿ, ಕೆರೆ ಸುತ್ತ ಮದ್ಯದ ಬಾಟಲಿ ಸಿಗರೇಟ್ ಬಿಡಿ ಗುಟ್ಕಾ ಪ್ಯಾಕೆಟ್ ಬಿದ್ದಿವೆ.

ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿ ಮಹಿಳೆಯರು, ನಾಗರೀಕರು ಪಬ್ಲಿಕ್ ನೆಕ್ಸ್ಟ್ ಮೂಲಕ ಒತ್ತಾಯ ಮಾಡಿದ್ದಾರೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Somashekar
Kshetra Samachara

Kshetra Samachara

12/12/2024 02:53 pm

Cinque Terre

4.98 K

Cinque Terre

0

ಸಂಬಂಧಿತ ಸುದ್ದಿ