ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಶೌಚಾಲಯದ ಪಕ್ಕ ಇಂದಿರಾ ಕ್ಯಾಂಟೀನ್ - ಪ್ರಾರಂಭಕ್ಕೂ ಮುನ್ನವೇ ಪಟ್ಟಣದಲ್ಲಿ ಅಪಸ್ವರ

ಅಳ್ನಾವರ: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಅಳ್ನಾವರ ಪಟ್ಟಣದಲ್ಲಿ ಭರದಿಂದ ಸಾಗಿದ್ದು, ಇದರ ನಿರ್ಮಾಣಕ್ಕೆ ತಾಲೂಕಿನ ಹಲವರ ವಿರೋಧ ವ್ಯಕ್ತವಾಗುತ್ತಿದೆ.

ಕಡಿಮೆ ದರದಲ್ಲಿ ಬಡವರ ಹೊಟ್ಟೆ ಭರಿಸುವ ಕಾರ್ಯದಲ್ಲಿ ಇಂದಿರಾ ಕ್ಯಾಂಟೀನ್ ಮೇಲುಗೈ ಸಾಧಿಸಿದ್ದು, ಆ ಕಾರಣಕ್ಕೆ ರಾಜ್ಯದ ಅತೀ ಚಿಕ್ಕ ತಾಲೂಕು ಅಳ್ನಾವರದಲ್ಲಿಯೂ ಸಹ ಕ್ಯಾಂಟೀನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ ಕ್ಯಾಂಟೀನ್ ಪ್ರಾರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಅಪಸ್ವರ ಪ್ರತಿಧ್ವನಿಸಿದ್ದು, ಕ್ಯಾಂಟೀನ್‌ಗೆ ಕಂಟಕವಾಗಿ ಪರಿಣಮಿಸಿದೆ. ಕಾರಣ ಇಂದಿರಾ ಕ್ಯಾಂಟೀನ್ ನಿರ್ಮಾಣದ ಸ್ಥಳ ಅಯೋಗ್ಯವಾಗಿದೆ ಎಂಬುದಾಗಿದೆ.

ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ಶೌಚಾಲಯವಿದ್ದು, ಅದರ ಪಕ್ಕದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಹೇಯ ಸಂಗತಿ. ತ್ವರಿತ ಗತಿಯಲ್ಲಿ ಶೌಚಾಲಯ ಬೇರೆಡೆಗೆ ಸ್ಥಳಾಂತರಿಸದಿದ್ದರೆ ಪ್ರಭಾವ ನೆಟ್ಟಗಿರದು ಎನ್ನುವುದು ತಾಲೂಕಿನ ಹಲವರ ಮಾತಾಗಿದೆ. ಕ್ಯಾಂಟೀನ್ ಪ್ರಾಂಭಕ್ಕೂ ಮುನ್ನ ಶೌಚಾಲಯ ಸ್ಥಳಾಂತರವಾಗುತ್ತಾ ಕಾದು ನೋಡಬೇಕಿದೆ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/12/2024 08:11 pm

Cinque Terre

21.52 K

Cinque Terre

1

ಸಂಬಂಧಿತ ಸುದ್ದಿ