ಕುಂದಗೋಳ : 1948 ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆದ ನಂತರದಲ್ಲಿ ಪ್ರತಿ ವರ್ಷ ಡಿಸೆಂಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಈ ವಿಶ್ವ ಮಾನವ ಹಕ್ಕುಗಳ ಉದ್ದೇಶ ಪ್ರತಿಯೊಬ್ಬರು ನ್ಯಾಯಯುತವಾಗಿ ಸಮಾಜದಲ್ಲಿ ಬದುಕುಬೇಕು ಎಂಬುದಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.
ಅವರು ಕುಂದಗೋಳ ಪಟ್ಟಣದ ಜಗದ್ಗುರು ಶಿವಾನಂದ ವಿದ್ಯಾಪೀಠದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಪೂಜ್ಯ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಸಿಗೆ ನಿರೆರೇದು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಪ್ರತಿ ವ್ಯಕ್ತಿ ಜೀವಿಸಲು ಶಿಕ್ಷಣ, ಸ್ವಾತಂತ್ರ್ಯ, ಉದ್ಯೋಗದಂತ ಮೂಲಭೂತ ಹಕ್ಕುಗಳನ್ನು ನೀಡುವುದಾಗಿದೆ ಎಂದರು.
ಮುಖ್ಯವಾಗಿ ಶಿಕ್ಷಣಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ, ಈ ಹಿನ್ನೆಲೆಯಲ್ಲಿ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾರದು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ನಮಗೆ ಮಾಹಿತಿ ನೀಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.
ಬಳಿಕ ವಕೀಲರಾದ ಎಸ್.ಎಸ್.ತೊಂಡೂರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು, ವಕೀಲರ ಸಂಘದ ಅಧ್ಯಕ್ಷ ಬಿ.ಪಿ.ಪಾಟೀಲ್, ಕಾರ್ಯದರ್ಶಿ ವಾಯ್.ಬಿ.ಬಿಳೇಬಾಳ, ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಕಲಾ ಪ್ರಭಾಕರ, ಗೀತಾ ಜಿ, ಸಂಸ್ಥೆಯ ಕಾರ್ಯದರ್ಶಿ ಯಲ್ಲಪ್ಪ ಎಸ್.ಮೇಗುಂಡಿ, ಪ್ರಾಚಾರ್ಯ ಲಕ್ಷ್ಮಣ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
11/12/2024 06:58 am