ನವಲಗುಂದ: ಯಮನೂರ ಜಾತ್ರೆ ಹಿನ್ನೆಲೆ ಪಟ್ಟಣದ ಬಸ್ ನಿಲ್ದಾಣಕ್ಕೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಉರಿ ಬಿಸಿಲಿನಲ್ಲೇ ಕಾಯುವ ದುಸ್ಥಿತಿ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಬಸ್ ಗಳ ಕೊರತೆ ಎನ್ನುತ್ತಿದ್ದಾರೆ ಪ್ರಯಾಣಿಕರು.
ಯಮನೂರ ಚಾಂಗದೇವನ ದರ್ಶನಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ಈಗ ಪಟ್ಟಣದ ಬಸ್ ನಿಲ್ದಾಣಕ್ಕೂ ಆಗಮಿಸುತ್ತಿದ್ದು, ತೆರಳಲು ಬಸ್ ಗಳ ಕೊರತೆ ಉಂಟಾಗುತ್ತಿದೆ. ಧಾರವಾಡಕ್ಕೆ ತೆರಳಲು ಬಸ್ ಗಳು ಸರಿಯಾದ ಸಮಯಕ್ಕೆ ಇಲ್ಲದೇ ಇರೋದ್ರಿಂದ ಗಂಟೆ ಗಟ್ಟಲೆ ಕುಟುಂಬ ಸಹಿತವಾಗಿ ನಿಲ್ದಾಣದಲ್ಲೇ ಕೂರುವ ಪರಿಸ್ಥಿತಿ ಬಂದಿದೆ. ಇದರಿಂದ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
Kshetra Samachara
21/03/2022 06:40 pm