ಹುಬ್ಬಳ್ಳಿ: ಸರ್ಕಾರದ ಕಾರ್ಮಿಕ ವಿರೋಧಿ, ಜನವಿರೋಧಿ, ಕಾರ್ಪೋರೇಟ್ ಪರವಾದ ದಾಳಿಯನ್ನು ಪ್ರತಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಶನ್‌ಗಳ ಕರೆಯ ಮೇರೆಗೆ ಎಐಯುಟಿಯುಸಿ ಜಿಲ್ಲಾ ಸಮಿತಿಯಿಂದ ಇದೇ ಮಾರ್ಚ್ 28 ಹಾಗೂ 29 ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ ಹೇಳಿದರು.
ಕೊರೊನಾದಿಂದ ಸಾಕಷ್ಟು ಜನರು ತೊಂದರೆಗೀಡಾಗಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕರಾಳ ಮಸೂದೆಗಳು, ಸುಗ್ರೀವಾಜ್ಞೆಗಳು ಹಾಗೂ ನೀತಿಗಳ ಮೂಲಕ ಕಾರ್ಮಿಕರು ಹೋರಾಟಗಳ ಮೂಲಕ ಗಳಿಸಿರುವ ಹಲವಾರು ಹಕ್ಕುಗಳನ್ನು ಕಿತ್ತುಕೊಂಡಿವೆ ಅಲ್ಲದೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದರಿಂದ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಆಶಾ ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ನೌಕರರು ಮತ್ತು ಸ್ಕೀಮ್ ಸರ್ಕಾರಗಳ ಹಾಗೂ ದಿನಗೂಲಿ ನೌಕರರು, ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕುಟುಂಬಗಳ ಜನರು ತೀವ್ರ ಸಂಕಷ್ಟದಲ್ಲಿದೆ. ಉದ್ಯಮ ಹಾಗೂ ನೇಮಕಾತಿಗಳಿಗೆ ತಡೆಯಾಜ್ಞೆ, ಅವಧಿಗೆ ಮುಂಚೆಯೇ
Kshetra Samachara
21/03/2022 01:11 pm