ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಕೋವಿಡ್ ವಿಚಾರವಾಗಿ ಬೆದರಿಸೋ ತಂತ್ರ ಮಾಡುತ್ತಿದೆ. ಹೆದರಿಲ್ಲ ಅಂದ ತಕ್ಷಣ FIR ಮಾಡಿದ್ರು. ಯಾರ ಯಾರ ಹೆಸರ ಹೇಳುತ್ತಿದ್ದಾರೆ ಅವರು ಮಾನಹಾನಿ ನೋಟಿಸ್ ಕೊಡಿ. ಸುಮ್ಮನೆ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಸುಧಾಕರ್, ಬೊಮ್ಮಾಯಿ ಹೆಸರು ಹೇಳತ್ತಿದ್ದಾರೆ. ನಾವು ಶೀಘ್ರವೇ ವಕ್ಫ್ ತಿದ್ದುಪಡಿ ಮಾಡಿ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇಜವ್ದಾರಿಯಾಗಿ ಮಾತಡುತ್ತಿದ್ದಾರೆ. 150 ಕೋಟಿ ಆಮಿಷ ಅಟ್ಟರ್ ನಾನ್ ಸೆನ್ಸ್. ನಮ್ಮ ಅವಧಿಯಲ್ಲೂ ಕೆಲ ನೋಟಿಸ್ ಹೋಗಿರಬಹುದು. ಅದನ್ನೂ ತಗೀರಿ. ನಮ್ಮ ಮಂತ್ರಿಗಳ ಇದ್ರು ಹೊರಬರಲಿ. 150 ಕೋಟಿ ಅಲ್ಲ, 1500 ಕೋಟಿ ಎಂದು ಹೇಳಬೇಕಿತ್ತು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2024 01:33 pm