ಹುಬ್ಬಳ್ಳಿ: 134 ಪೌರಕಾರ್ಮಿಕರ ನೇರ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸುವಂತೆ, ಹಾಗೂ 799 ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪೌರಕಾರ್ಮಿಕರು ಬೃಹತ್ ಆರಬೆತ್ತಲೆ ಮೆರವಣಿಗೆ ಮಾಡಿದರು.
ಈಗಾಗಲೇ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾಲ್ಕು ದಿನಗಳಿಂದ ಪಾಲಿಕೆ ಎದುರಿಗೆ ಅಹೋರಾತ್ರಿ ಪ್ರತಿಭಟನೆಗೆ ಕುಳಿತಿದ್ದು, ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯಿಂದ ಅರೆಬೆತ್ತಲೆ ಮೆರವಣಿಗೆ ಮಾಡುವುದರ ಮೂಲಕ ಪಾಲಿಕೆ ವಿರುದ್ಧ ದಿಕ್ಕಾರ ಹಾಕುತ್ತ ಪ್ರತಿಭಟನೆ ಮಾಡಿದರು.
Kshetra Samachara
15/12/2024 08:39 am