ಕುಂದಗೋಳ : ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಒಳ ಮೀಸಲಾತಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರು, ರಾಜ್ಯದ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜಕ್ಕೆ ಒಳ ಮೀಸಲಾತಿ ನೀಡದೆ ಕಾಲಹರಣ ಮಾಡುತ್ತಿದ್ದು ಅಧಿವೇಶನದಲ್ಲಿ ಈ ವಿಷಯ ಪ್ರಸ್ಥಾಪಿಸುವಂತೆ ಶಾಸಕ ಎಮ್.ಆರ್.ಪಾಟೀಲ ಅವರಿಗೆ ಮಾದಿಗ ಮತ್ತು ಉಪಜಾತಿಗಳ ಸಂಘಟನೆ ಒಕ್ಕೂಟ ಶನಿವಾರ ಮನವಿ ಮಾಡಿದರು.
ಶಾಸಕರ ನಿವಾಸದ ಎದುರು ತಮಟೆ ಬಾರಿಸಿ ಮನವಿ ಪತ್ರ ನೀಡಿ ಆಗ್ರಹಿಸಿ, ಹರಿಯಾಣ ಸರ್ಕಾರ ಈಗಾಗಲೇ ಈ ಕಾರ್ಯ ಮಾಡಿದ್ದು, ಆದರೆ ಇಲ್ಲಿನ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುವ ಮೂಲಕ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಮಾಗಡಿ, ಗೋಪಾಲ ದೊಡ್ಡಮನಿ, ಹನಮಂತ ಮೇಲಿನಮನಿ, ಶರೀಫ್ ದೊಡ್ಡಮನಿ, ಈರಪ್ಪ ನಾಗನ್ನವರ, ಉಮೇಶ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
Kshetra Samachara
14/12/2024 08:14 pm