ಹುಬ್ಬಳ್ಳಿ: ಪಂಚಮಸಾಲಿ ಹೋರಾಟದ ವಿಚಾರವಾಗಿ ನನಗೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ್ ಬೆಲ್ಲದ್, ಸ್ವಾಮೀಜಿ ಫೋನ್ ಮಾಡಿದ್ದರು. ನನಗೆ ಬಂದಿರೋ ಮಾಹಿತಿ ಪ್ರಕಾರ, ಶಾಂತಿಯುತವಾಗಿ ಹೋರಾಟ ಮಾಡ್ತಿದ್ರು. ಮಿನಿಮಮ್ ಬಲ ಪ್ರಯೋಗ ಮಾಡಬಹುದಿತ್ತು. ಆದ್ರೆ ಸರ್ಕಾರ ಮಾಕ್ಸಿಮಮ್ ಬಲ ಪ್ರಯೋಗ ಮಾಡಿದೆ. ವೈರಿಗಳ ತರಹ ಇವರು ನಡೆಸಿಕೊಂಡಿದ್ದಾರೆ. ಇದನ್ನು ಅತ್ಯಂತ ತೀವ್ರವಾಗಿ ನಾನು ಖಂಡಿಸುತ್ತೇನೆ. ಅಲ್ಲಿ ಹೋರಾಟ ಮಾಡಿದವರು ಗುಂಡಾಗಳಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2024 04:55 pm