ಹುಬ್ಬಳ್ಳಿ: ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ನಾನು ಗೆಲ್ಲುತ್ತೇನೆ. ಬಾದಾಮಿಯವರೂ ಕರೆಯುತ್ತಾರೆ ಹಾಗೇ ಚಾಮುಂಡೇಶ್ವರಿಯವರೂ ಕರೆಯುತ್ತಾರೆ.ಚುನಾವಣೆ ಬಂದಾಗ ನೋಡೊಣ. ಬೊಮ್ಮಾಯಿಗೆ ಸೋಲುವ ಭಯವಿದ್ದಿದ್ದರಿಂದ ಎರಡೆರೆಡು ಕಡೆ ನಿಲ್ಲುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಹಿಂದುತ್ವ ಉಪಯೋಗಿಸಿಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಇದು ಬಿಜೆಪಿ ಭ್ರಮೆ ಮಾತ್ರ.
ಅದು ಚುನಾವಣೆ ವಿಷಯಗಳೇ ಅಲ್ಲ. ಪೆಟ್ರೋಲ್, ದೈನಂದಿನ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಬಿಜೆಪಿಯನ್ನು ಜನ ಸೋಲಿಸಲು ಈಗಲೇ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.
ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ. ಆದರೆ ಬಿಜೆಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ , ಜೆಡಿಯುನಿಂದ ಹೋದವರ ಹಾಗೂ ಆರ್.ಎಸ್.ಎಸ್ ಬಣಗಳಿವೆ ಎಂದು ಟೀಕಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಿದ ಹಾಗೂ ದ್ರೋಹ ಬಗೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುದಿಲ್ಲ.
ಹುಬ್ಬಳ್ಳಿಯಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಪತ್ರಕರ್ತರೊಂದಿಗೆ ಹಂಚಿಕೊಂಡ ಒಟ್ಟಾರೆ ಅಭಿಪ್ರಾಯಗಳು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2022 02:47 pm