1.
ಮಹಿಳಾ ದಿನಾಚರಣೆಗೆ 'ರಾಣಿ ರೈಲು'
ಹುಬ್ಬಳ್ಳಿ: ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗ ಮಹಿಳಾ ದಿನಾಚರಣೆಯನ್ನ ವಿಶೇಷವಾಗಿ ಆಚರಿಸಿದೆ.ಮಹಿಳೆಯರೇ ಇಂದು ಹುಬ್ಬಳ್ಳಿಯಿಂದ ಕಾರಟಗಿಯವರೆಗೆ ಮಹಿಳೆಯರೇ ರೈಲು ಚಲಾಯಿಸಿದ್ದಾರೆ. ಮಹಿಳಾ ಟಿಕೆಟ್ ಪರಿಶೀಲಕರು, ಮಹಿಳಾ ಲೋಕೋಪೈಲೆಟ್, ಮಹಿಳಾ ಆರ್.ಪಿ.ಎಫ್, ಮಹಿಳಾ ಸ್ಟೇಷನ್ ಮಾಸ್ಟರ್ ಹೀಗೆ ಎಲ್ಲವೂ ಮಹಿಳಾಮಯವೇ ಆಗಿತ್ತು.
https://publicnext.com/article/nid/Hubballi-Dharwad/Human-Stories/Government/node=612852
======
2.
ಕಾಮಗಾರಿಗೆ ಪ್ಯಾಕೇಜ್ ಪದ್ಧತಿ ಬೇಡವೇ ಬೇಡ
ಧಾರವಾಡ: ಧಾರವಾಡದ ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುವ ವಿವಿಧ ಕಾಮಗಾರಿಯಲ್ಲಿ ಪ್ಯಾಕೇಜ್ ಪದ್ಧತಿ ತರಲಾಗಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅನ್ಯಾಯವಾಗುತ್ತಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪಿಡಬ್ಲುಡಿ ಮುಖ್ಯ ಎಂಜಿನಿಯರ್ಗೆ ಮನವಿ ಸಲ್ಲಿಸಿದ್ದಾರೆ.
https://publicnext.com/article/nid/Hubballi-Dharwad/Infrastructure/Government/node=612679
========
3.
ನನಗೆ ನ್ಯಾಯ ಬೇಕು ನ್ಯಾಯ ..
ಹುಬ್ಬಳ್ಳಿ: ಹುಬ್ಬಳ್ಳಿ ವೀರಾಪುರ ಓಣಿ ನಿವಾಸಿ ಮಹಾದೇವಪ್ಪ ನಾಲವಾಡ ಅವರು ಕೊರೊನಾ ವೇಳೆ ಫುಡ್ ಕಿಟ್ ಮೇಲೆ ಪ್ರಸಾದ್ ಅಬ್ಬಯ್ಯ ಹಾಗೂ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಭಾವ ಚಿತ್ರದ ಸ್ಟಿಕರ್ ಅಂಟಿಸಿದ್ದರು. ಇದರ ಖರ್ಚು ಕೊಡೋದಾಗಿ ಮೊದಲೇ ಹೇಳಿದ್ದ ಕಾರ್ಪೋರೇಟರ್ ನಿರಂಜನ್ ಹಿರೇಮಠ ನಂತರ ಹಣ ಕೊಡದೇ ಸತಾಯಿಸಿದ್ದಾರೆ. ಪುನಃ ಹಣ ಕೇಳಿದ್ದಕ್ಕೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹದೇವಪ್ಪ ನಾಲವಾಡ ಆರೋಪಿಸಿದ್ದಾರೆ.
https://publicnext.com/article/nid/Hubballi-Dharwad/Politics/Crime/node=613046
======
4.
ಮಹಿಳೆಯಿಂದ ಮಹಿಳೆಗೆ ಮೋಸ
ಹುಬ್ಬಳ್ಳಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿ ನಾನು ಎಂದು ಮಹಿಳೆಯೊಬ್ಬಳು ಮತ್ತೋರ್ವ ಮಹಿಳೆಯನ್ನ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಗೋಕುಲ ರಸ್ತೆಯ ಸರೋಜಾ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://publicnext.com/article/nid/Hubballi-Dharwad/Crime/node=612601
======
5.
ಅಕ್ರಮ ರಸಗೊಬ್ಬರ ಪೊಲೀಸ್ ವಶಕ್ಕೆ !
ಹಾವೇರಿ: ಅಕ್ರಮವಾಗಿ ರಸಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೂವರನ್ನ ಬಂಧಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://publicnext.com/article/nid/Crime/node=612740
=====
6.
ಧಾರವಾಡದಲ್ಲಿ ಸಣ್ಣ ನೀರಾವರಿ ಇಲಾಖೆ ಮೇಲೆ ಎಸಿಬಿ ರೇಡ್
ಧಾರವಾಡದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಣ ವರ್ಗಾಯಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಹಾಯಕ ಅಭಿಯಂತರರು, ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೇಲೆ ದಾಳಿ ನಡೆಸಿ, 17 ಲಕ್ಷ 80 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
https://publicnext.com/article/nid/Hubballi-Dharwad/Crime/Law-and-Order/node=612884
7.
ಕುಂದಗೋಳದಲ್ಲಿ ಮನಸೂರೆಗೊಂಡ ಮಹಿಳಾ ದಿನಾಚರಣೆ
ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕುಂದಗೋಳದಲ್ಲಿ ಸಾಧಕ ಮಹಿಳೆಯರಿಗೆ ತಹಶೀಲ್ದಾರ್ ಸನ್ಮಾನಿಸಿದ್ದಾರೆ. ಸಾಧಕರ ವೇಷಭೂಷಣ ತೊಟ್ಟ ಮಹಿಳೆಯರು ಕಣ್ಮನ ಸೆಳೆದಿದ್ದಾರೆ.
https://publicnext.com/article/nid/Hubballi-Dharwad/Cultural-Activity/node=612901
8.
2013ರಲ್ಲಿ ನಡೆದಿದ್ದ ಅಪಘಾತ: ಲಾರಿ ಚಾಲಕನಿಗೆ ಶಿಕ್ಷೆ
2013ರಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಇಂದು ಧಾರವಾಡದ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಲಾರಿ ಚಾಲಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
https://publicnext.com/article/nid/Hubballi-Dharwad/Law-and-Order/node=612868
9.
ಅರಿಶಿನ ಕುಂಕುಮ, ಹೂ-ಸಿಹಿ ಸಂಭ್ರಮ
ಮಹಿಳಾ ದಿನಾಚರಣೆ ಅಂಗವಾಗಿ ಕುಂದಗೋಳದಲ್ಲಿ ಅರಿಶಿನ ಕುಂಕುಮ, ಹೂ-ಸಿಹಿ ನೀಡಿ ಸಂಭ್ರಮಿಸಲಾಯಿತು. ಜ್ಞಾನಧಾರಾ ಶಾಲಾ ಆಡಳಿತ ಮಂಡಳಿಯಿಂದ ವಿಶಿಷ್ಟವಾಗಿ ಮಹಿಳಾ ದಿನ ಆಚರಿಸಲಾಗಿದೆ.
https://publicnext.com/article/nid/Hubballi-Dharwad/Cultural-Activity/node=612896
10.
ರೈಲ್ವೆ ಅಪಘಾತಕ್ಕೆ ಬ್ರೇಕ್ ಹಾಕಲು 'ಕವಚ ತಂತ್ರಜ್ಞಾನ'
ರೈಲು ಅಪಘಾತಗಳನ್ನು ತಡೆಗಟ್ಟಲು ನೈಋತ್ಯ ವಲಯದ ವ್ಯಾಪ್ತಿಯಲ್ಲಿ 'ಕವಚ ತಂತ್ರಜ್ಞಾನ' ಅಳವಡಿಸುವುದಕ್ಕಾಗಿ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ರೈಲು ಹಳಿಗಳ ಪಕ್ಕದಲ್ಲಿ ಅಳವಡಿಸುವ ಈ ಕವಚ ತಂತ್ರಜ್ಞಾನದಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದೆ.
https://publicnext.com/article/nid/Hubballi-Dharwad/Science-and-Technology/Government/node=612831
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/03/2022 10:02 pm