ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಅಕ್ರಮ ರಸಗೊಬ್ಬರ ಸಾಗಾಟದ ವೇಳೆ ಕಾರ್ಯಾಚರಣೆ: ಮೂವರು ಪೊಲೀಸ್ ವಶಕ್ಕೆ

ಹಾವೇರಿ: ಅಕ್ರಮವಾಗಿ ರಸಗೊಬ್ಬರ ಸಾಗಿಸುತ್ತಿದ್ದ ವೇಳೆಯಲ್ಲಿ ಖಚಿತವಾದ ಮಾಹಿತಿ ಕಲೆ ಹಾಕಿದ ಪೊಲೀಸರು ಲಾರಿ ಸಮೇತ ಅಕ್ರಮವಾಗಿ ರಸಗೊಬ್ಬರ ಸಾಗಿಸುತ್ತಿದ್ದ ಮೂರು ಜನರ ಬಂಧಿಸುವಲ್ಲಿ ಹಾವೇರಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಹೌದು. ಗ್ರಾನ್ಯೂಲಾರ್ ನಿಮ್ ಕೋಟೆಡ್ ಯೂರಿಯಾ & ನೈಟ್ರೋಗೋಸ್ ಕೆಮಿಕಲ್ ಕಾಂಪೌಂಡ್ ಎಂಬ ರಸಗೊಬ್ಬರ ವಶಕ್ಕೆ ಪಡೆದಿದ್ದು, ಹಾವೇರಿಯಿಂದ ಕೇರಳ ಹಾಗೂ ತಮಿಳುನಾಡಿಗೆ ರವಾನಿಸುತ್ತಿದ್ದ ದಂಧೆಕೊರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ರೈತರ ಹೆಸರಿನಲ್ಲಿ ಕಡಿಮೆ ದರದಲ್ಲಿ ಖರೀದಿಸಿ, ಹೆಚ್ಚಿನ ದರಕ್ಕೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಕಲೆ ಹಾಕಿದ್ದ ಪೊಲೀಸರು, ಹಾವೇರಿಯ ಹಳೆ ಪಿಬಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ದಂಧೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ಸುಮಾರು 7,ಲಕ್ಷದ 20, 000 ಸಾವಿರ ಮೌಲ್ಯದ ರಸಗೊಬ್ಬರ ವಶಕ್ಕೆ ಪಡೆದಿದ್ದು, ಗೋಡೌನ್ ಮಾಲೀಕ ಮಹದೇವಗೌಡ ಗಾಜಿಗೌಡ್ರು ಪರಾರಿಯಾಗಿದ್ದು, ಶಬರಿ ಮರುಗನ್, ಸೇಲಂ. ಮಹೇಶ ಶಿವಬಸಪ್ಪ, ಹಿರೇಲಿಂಗದಹಳ್ಳಿ ಎಂಬುವ ಆರೋಪಿತರನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

08/03/2022 01:47 pm

Cinque Terre

61.22 K

Cinque Terre

0

ಸಂಬಂಧಿತ ಸುದ್ದಿ