ಬ್ಯಾಂಕಾಕ್: ಕುಡಿದ ನಶೆಯಲ್ಲಿ ಪ್ರವಾಸಿಗನೊಬ್ಬ ಫುಕೆಟ್ ನಗರದ ಪೊಲೀಸರ ಮೇಲೆ ಬೀದಿಯಲ್ಲೇ ದಾಳಿ ಮಾಡಿದ್ದಾನೆ. ಅರೆಬೆತ್ತಲೆಯಾಗಿ ಬೀದಿಗೆ ಬಂದ ಈತನ ವರ್ತನೆ ಗೂಂಡಾವರ್ತನೆ ಕಂಡು ನಾಗರಿಕರು ದಿಕ್ಕಾಪಾಲಾಗಿ ಓಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಕರೋನ್ ಪೊಲೀಸ್ ಠಾಣೆ ಸಿಬ್ಬಂದಿ ರಷ್ಯಾ ಮೂಲದ ಈ ವ್ಯಕ್ತಿಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ ಈತ ಪೊಲೀಸರ ಮೇಲೆಯೇ ಏರಿ ಹೋಗಿದ್ದಾನೆ. ಸದ್ಯ ಆತನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬುಧವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.
PublicNext
12/12/2024 05:52 pm