ಕಾಬುಲ್ : ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಕಾಬೂಲ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಟ 6 ಮಂದಿ ಸಾವನ್ನಪ್ಪಿದ್ದಾರೆ.
ಹೌದು ಕಾಬೂಲ್‌ನಲ್ಲಿ ಬುಧವಾರ ಮಸೀದಿಯೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್‌ನ ನಿರಾಶ್ರಿತರ ಮತ್ತು ವಾಪಸಾತಿ ಖಾತೆಯ ಉಸ್ತುವಾರಿ ಸಚಿವ ಖಲೀಲ್ ರಹಮಾನ್ ಹಕ್ಕಾನಿ ಎಂದು ಅವರ ಸೋದರಳಿಯ ತಿಳಿಸಿದ್ದಾರೆ. ಇವರೊಂದಿಗೆ ಇತರೆ ಆರು ಜನರು ಸಹ ಸಾವನ್ನಪ್ಪಿದ್ದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ಐಎಸ್ಐಎಸ್) ದಾಳಿಯ ಹೊಣೆ ಹೊತ್ತುಕೊಂಡಿದೆ.
ಖಲೀಲ್ ಹಕ್ಕಾನಿ ಅವರು ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಚಿಕ್ಕಪ್ಪ ಮತ್ತು ತಾಲಿಬಾನ್‌ಗೆ ಪ್ರಮುಖ ನಿಧಿಸಂಗ್ರಹಗಾರರಾಗಿದ್ದರು. ಹಕ್ಕಾನಿ ಅವರು ಮಾತನಾಡಿ, ನಾವು ಅತ್ಯಂತ ಧೈರ್ಯಶಾಲಿ ಮುಜಾಹಿದ್ ಅನ್ನು ಕಳೆದುಕೊಂಡಿದ್ದೇವೆ, ನಾವು ಅವರನ್ನು ಮತ್ತು ಅವರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ತಿಳಿಸಿದರು. ಇದರೊಂದಿಗೆ ಖಲೀಲ್ ಹಕ್ಕಾನಿ ನೆಟ್‌ವರ್ಕ್‌ನ ಹಿರಿಯ ನಾಯಕ ಮತ್ತು ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಸಂಘರ್ಷದ ಉದ್ದಕ್ಕೂ ಪ್ರಮುಖ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಬಲವಾದ ಸ್ಫೋಟವು ಮಸೀದಿ ಆವರಣದಲ್ಲಿ ಹಕ್ಕಾನಿ ಮತ್ತು ಇತರ ಆರು ಜನರನ್ನು ಬಲಿ ತೆಗೆದುಕೊಂಡಿತು. ಈ ಹತ್ಯೆಯು ತಾಲಿಬಾನ್ ಶ್ರೇಣಿಯೊಳಗೆ ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝಾದ ನಾಯಕತ್ವದ ಶೈಲಿಯನ್ನು ಸಿರಾಜುದ್ದೀನ್ ಹಕ್ಕಾನಿ ಬಹಿರಂಗವಾಗಿ ಟೀಕಿಸಿದ ಕೇವಲ ಮೂರು ದಿನಗಳ ನಂತರ ಈ ಹತ್ಯೆ ನಡೆದಿದೆ.
PublicNext
12/12/2024 01:32 pm