ಲಂಡನ್: ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹಿಸ್ಟಾರಿಕ್ ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿ ಅಧ್ಯಕ್ಷೆಯಾಗಿ ಭಾರತೀಯ ಮೂಲದ ವಿದ್ಯಾರ್ಥಿನಿ ಅನುಷ್ಕಾ ಕಾಳೆ ಆಯ್ಕೆಯಾಗಿದ್ದಾರೆ.
ಈ ಸೊಸೈಟಿ 1815ರಿಂದ ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.
ಮುಂದಿನ ಈಸ್ಟರ್ 2025 ಅವಧಿಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 126 ಮತಗಳನ್ನು ಪಡೆದ ಕಾಳೆ, ಅವಿರೋಧವಾಗಿ ಆಯ್ಕೆಯಾದರು. ಈ ಸೊಸೈಟಿಯ ಚರ್ಚಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಅವರು, ವಿಶ್ವವಿದ್ಯಾನಿಲಯದಲ್ಲಿ ಇಂಡಿಯಾ ಸೊಸೈಟಿಯಂಥ ಸಾಂಸ್ಕೃತಿಕ ಸೊಸೈಟಿಗಳ ಜತೆ ಸಂಬಂಧವನ್ನು ಬಲಪಡಿಸುವ ವೇದಿಕೆಯನ್ನು ನಿರ್ವಹಿಸುತ್ತಿದ್ದಾರೆ.
ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿಗೆ 2025ರ ಈಸ್ಟರ್ ಅವಧಿಗಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ಇದು ದೊಡ್ಡ ಗೌರವ. ಎಲ್ಲ ಸದಸ್ಯರ ಬೆಂಬಲಕ್ಕೆ ಕೃತಜ್ಞತೆಗಳು ಎಂದು ಅನುಷ್ಕಾ ತಿಳಿಸಿದ್ದಾರೆ.
PublicNext
10/12/2024 04:04 pm