ಡಮಾಸ್ಕಸ್ : ಸಿರಿಯಾ ಅಧ್ಯಕ್ಷ ದೇಶ ತೊರೆದ ಬೆನ್ನಲ್ಲೇ ಬಂಡುಕೋರರ ಅರಮನೆ ಮೇಲೆ ದಿಢೀರ್ ದಾಳಿ ನಡೆಸಿ ಪೀಠೋಪಕರಣ ಮತ್ತು ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಓಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೌದು ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆಯುತ್ತಿದ್ದಂತೆ ಸಿರಿಯಾದಲ್ಲಿ ಅರಾಜಕತೆ ತಾಂಡವವಾಡುತ್ತಿದೆ.
ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ದೊರೆತಿರುವ ವಿಡಿಯೊದಲ್ಲಿ ಭಾನುವಾರ ಜನರು ಅಧ್ಯಕ್ಷರ ಅರಮನೆಗೆ ನುಗ್ಗಿ ಬೆಲೆಬಾಳುವ ಆಭರಣ ಮತ್ತು ದುಬಾರಿ ವಸ್ತುಗಳಿಗೆ ಶೋಧ ನಡೆಸುತ್ತಿರುವುದು ಕಂಡುಬಂದಿದೆ.
ಅಧ್ಯಕ್ಷರ ಮತ್ತೊಂದು ಅರಮನೆಗೆ ನುಗ್ಗಿರುವ ಮಹಿಳೆಯರು ಮತ್ತು ಪುರುಷರನ್ನೊಳಗೊಂಡ ಮತ್ತೊಂದು ಗುಂಪು, ಸಿಕ್ಕ ಸಿಕ್ಕ ವಸ್ತುಗಳು, ಅಲಂಕಾರಿಕ ಹೂಕುಂಡಗಳನ್ನು ಹೊತ್ತೊಯ್ದಿದ್ದಾರೆ.
ಕೊನೆಗೂ ಬಂಡುಕೋರರು ರಾಜಧಾನಿ ಡೆಮಾಸ್ಕಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಧ್ಯಕ್ಷ ಬಷರ್ ಒತ್ತಾಯಪೂರ್ವಕವಾಗಿ ದೇಶ ತೊರೆದಿದ್ದಾರೆ.
PublicNext
09/12/2024 02:51 pm