ಧಾರವಾಡ: ಧಾರವಾಡದ ಸಣ್ಣ ನೀರಾವರಿ ಇಲಾಖೆ ಎಇ ಹಾಗೂ ನೀರಾವರಿ ಇಲಾಖೆಯ ವಿಚಕ್ಷಣಾ ವಿಭಾಗದ ಎಇಇ ಅವರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬರೊಬ್ಬರಿ 17 ಲಕ್ಷ 80 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಧಾರವಾಡದ ಸತ್ತೂರು ಲೇಔಟ್‌ನಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ಎಇ ಪ್ರಶಾಂತ ಸತ್ತೂರ ಅವರ ಮನೆಯಿಂದ ಎಇಇ ಎಸ್.ಮಂಜಿನಾಳ ಹಾಗೂ ಮಂಜಿನಾಳ ಅವರ ಸಂಬಂಧಿ ಮಹಾಂತೇಶ ಎಂಬುವವರು ಹಣ ತೆಗೆದುಕೊಂಡು ಹೊರಟಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ಅವರ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಎಇ ಅವರ ಮನೆಯಿಂದ ಹಣ ಪಡೆದುಕೊಂಡು ಎಇಇ ಅವರ ಮನೆಗೆ ಹೋಗಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ಮಹಾಂತೇಶ ಜಿದ್ದಿ ನೇತೃತ್ವದ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.
Kshetra Samachara
08/03/2022 06:12 pm