ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾತ್ರಿ ಬೈಕ್ ಮೇಲೆ ಗಸ್ತು ತಿರುಗಿದ ಕಮಿಷನರ್

ಧಾರವಾಡ: ಧಾರವಾಡದ ಅನೇಕ ಪ್ರದೇಶಗಳಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಬೈಕ್ ಮೇಲೆ ಗಸ್ತು ತಿರುಗಿದ್ದಾರೆ.

ಸಾರ್ವಜನಿಕರು ಪೊಲೀಸರೊಂದಿಗೆ ಸ್ನೇಹದಿಂದಿರಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸಾರ್ವಜನಿಕರು ಪೊಲೀಸರೊಂದಿಗೆ ಬಾಂಧವ್ಯದಿಂದ ಇರಬೇಕು ಎಂಬ ಉದ್ದೇಶದಿಂದ ಧಾರವಾಡದ ಅನೇಕ ಪ್ರದೇಶಗಳಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಬೈಕ್ ಮೇಲೆ ಸಂಚರಿಸಿ ಗಮನಸೆಳೆದರು. ಅಲ್ಲದೇ ಸಾರ್ವಜನಿಕರ ಸಮಸ್ಯೆ ಏನು ಎಂಬುದರ ಕುರಿತು ಅನೇಕ ಕಡೆ ಸಾರ್ವಜನಿಕರ ಅಹವಾಲನ್ನೂ ಅವರು ಸ್ವೀಕರಿಸಿದರು.

ಪೊಲೀಸ್ ಆಯುಕ್ತರಿಗೆ ಡಿಸಿಪಿ ಮಹಾಲಿಂಗ ನಂದಗಾವಿ, ಎಸಿಪಿ ಪ್ರಶಾಂತ ಸಿದ್ಧನಗೌಡರ, ಇನ್‌ಸ್ಪೆಕ್ಟರ್‌ಗಳಾದ ಪ್ರಭು ಗಂಗೇನಹಳ್ಳಿ, ಸಂಗಮೇಶ ದಿಡಿಗನಾಳ, ಕಾಡದೇವರಮಠ ಸೇರಿದಂತೆ ಅನೇಕರು ಸಾಥ್ ನೀಡಿದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/12/2024 07:49 am

Cinque Terre

20.8 K

Cinque Terre

1

ಸಂಬಂಧಿತ ಸುದ್ದಿ