ಕುಂದಗೋಳ: ಮಹಿಳೆ ಮನಸ್ಸು ಮಾಡಿದ್ರೆ ಏನು ಸಾಧನೆ ಬೇಕಾದ್ರೂ ಮಾಡಬಲ್ಲಳು ಎಂಬುದಕ್ಕೆ ದ್ವಾಪರಯುಗದಲ್ಲೇ ಸಾಕ್ಷಿಯಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾಳೆ ಎಂದು ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹೇಳಿದರು.
ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ದೇಶಿಸಿ ಮಾತನಾಡಿ 'ಇಂದು ಮಹಿಳೆಯರ ಗೌರವದ ದಿನ' ಎಂದರು.
ಬಳಿಕ ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ ಉಪಾಧ್ಯಕ್ಷ ಹಣುಮಂತಪ್ಪ ರಣತೂರ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ಚಿಕ್ಕ ವಯಸ್ಸಿನಲ್ಲೇ ಡಾಕ್ಟರೇಟ್ ಪಡೆದ ಶ್ರೀಶಾ ಮುದಗಣ್ಣನವರ ಹಾಗೂ ಅವರ ತಾಯಿ ಜೊತೆ ಪಟ್ಟಣ ಪಂಚಾಯತಿಯ ಸರ್ವ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಜೈ ಹೋ ಗೀತೆ ಮೂಲಕ ಮಹಿಳಾ ಸಾಧಕರ ವೇಷಭೂಷಣ ತೊಟ್ಟ ಮಹಿಳೆಯರು ನೋಡುಗರ ಗಮನ ಸೆಳೆದರು.
ಈ ವೇಳೆ ವೇದಿಕೆ ಮೇಲೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸಿದರೇ, ಸ್ವಾತಂತ್ರ್ಯ ಹೋರಾಟಗಾರ ವೇಷ ಧರಿಸಿದ ಮಕ್ಕಳು ನೋಡುಗರ ಮನ ಗೆದ್ದರು.
Kshetra Samachara
08/03/2022 06:29 pm