ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೂ ಪೂರ್ವ ಫುಡ್ ಕಿಟ್ ನೀಡಿ ಜನರಿಗೆ ಹಸಿವು ನೀಗಿಸುವ ಕೆಲಸ ಮಾಡಿದ್ದ ಮಹಾನಗರ ಪಾಲಿಕೆ ಸದಸ್ಯನ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಆ ಕಾರ್ಪೊರೇಟರ್ ಯಾರು ಏನಿದು ಕಥೆ ಎಂಬುದರ ಬಗ್ಗೆ ತೋರಿಸ್ತೀವಿ ನೋಡಿ..
ಹೀಗೆ ಕೈಯಲ್ಲಿ ಪೇಪರ್ ಹಾಗೂ ಕರಪತ್ರ ಹಿಡಿದುಕೊಂಡು ನಿಂತಿರುವ ಈ ವೃದ್ಧನ ಹೆಸರು ಮಹಾದೇವಪ್ಪ ನಾಲವಾಡ. ಹುಬ್ಬಳ್ಳಿಯ ವಿರಾಪೂರ ಓಣಿ ನಿವಾಸಿ. ಕಳೆದ ವರ್ಷ ಕೊರೊನಾ ಎಂಬ ಮಹಾಮಾರಿಗೆ ಸಿಲುಕಿದ ಸಂದರ್ಭದಲ್ಲಿ ಮುಂಬರುವ ಚುನಾವಣೆಯನ್ನು ಗುರಿಯಾಗಿಸಿ ಸಿಂಪತಿ ಗಿಟ್ಟಿಸಿಕೊಳ್ಳಲು ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಜನರಿಗೆ ಸಹಾಯ ಮಾಡಿದ್ದರು. ಈಗ ಇದೇ ಕಾರ್ಪೋರೇಟರ್ ಮೇಲೆ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಫುಡ್ ಕಿಟ್ ಹಂಚುವ ಧಾನ್ಯಗಳನ್ನು ಪ್ಯಾಕೆಟ್ ಮಾಡಿದ ನಂತರ ಪ್ಯಾಕೆಟ್ ಮೇಲೆ ಶಾಸಕ ಪ್ರಸಾದ್ ಅಬ್ಬಯ್ಯ, ಹಾಗೂ ನಿರಂಜನಯ್ಯ ಹಿರೇಮಠ ಅವರ ಭಾವಚಿತ್ರ ಅಂಟಿಸಲಾಗಿತ್ತು. ಸ್ಟಿಕ್ಕರ್ ಖರ್ಚನ್ನು ಈ ವೃದ್ಧ ನೋಡಿಕೊಂಡಿದ್ದಾರಂತೆ. ಆದರೆ ಹಣ ಕೊಡುವುದಾಗಿ ಹೇಳಿದ್ದ ನಿರಂಜನಯ್ಯ ಹಿರೇಮಠ ಆಮೇಲೆ ಹಣ ನೀಡಲಾಗುವುದಿಲ್ಲ ಎಂದು ಕೈ ಎತ್ತಿದ್ದಾರಂತೆ.
ಇನ್ನು ಪದೇ ಪದೇ ಹಣ ಕೇಳಿದ್ದಕ್ಕೆ ವೃದ್ಧನಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಮಹಾದೇವಪ್ಪ ಆರೋಪಿಸಿದ್ದಾರೆ. ಈಗಾಗಲೇ ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಅವರ ಜೊತೆ ಕೆಲಸ ಮಾಡಿದ ಪರಿಣಾಮ ನನ್ನ ಕಾಲು ಕಳೆದುಕೊಳ್ಳುವ ಪ್ರಸಂಗ ಬಂದೊದಗಿದೆ. ಆದ್ದರಿಂದ ನನಗೆ ಹಣ ನೀಡಬೇಕು ಇಲ್ಲವಾದರೆ ಪಾಲಿಕೆ ಸದಸ್ಯರ ಕಛೇರಿ ಮುಂದೆ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಮಹಾದೇವಪ್ಪ ನಾಲವಾಡ ಎಚ್ಚರಿಕೆ ನೀಡಿದ್ದಾರೆ.
Kshetra Samachara
08/03/2022 09:41 pm