ಹುಬ್ಬಳ್ಳಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಸಂಪರ್ಕಿಸಿ, ನಿಮ್ಮ ಲ್ಯಾಬ್‌ನಲ್ಲಿ ನಮ್ಮ ಕಚೇರಿಯ 40 ಸಿಬ್ಬಂದಿಯ ರಕ್ತ ಪರೀಕ್ಷೆ ಮಾಡಬೇಕಿದೆ ಎಂದು ಸುಳ್ಳು ಹೇಳಿ 25 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲ ರಸ್ತೆಯ ಸರೋಜಾ ಎಂಬುವರಿಗೆ ಅಪರಿಚಿತ ಮಹಿಳೆಯೊಬ್ಬಳು ವಾಟ್ಸ್ ಆ್ಯಪ್ ಮೂಲಕ ಪರಿಚಯಿಸಿಕೊಂಡಿದ್ದಳು. ಸಿಐಎಸ್‌ಎಫ್ ಅಧಿಕಾರಿ ಸೋಗಿನಲ್ಲಿ ರಕ್ತ ಪರೀಕ್ಷೆ ಮಾಡಿಸುವುದಾಗಿ ನಂಬಿಸಿದ್ದಳು. ಹಣ ಜಮಾ ಮಾಡುವುದಾಗಿ ನಂಬಿಸಿ ಸರೋಜಾ ಅವರಿಂದ ವಿವಿಧ ಮಾಹಿತಿ ಪಡೆದು, ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Kshetra Samachara
08/03/2022 09:34 am