ಕುಂದಗೋಳ : ಇಲ್ಲೊಂದು ಊರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಹು ವಿಶೇಷವಾಗಿ ಅಂದ್ರೆ ಮಹಿಳೆಯರಿಗೆ ಅರಿಶಿನ, ಕುಂಕುಮ, ಹೂ ನೀಡುವ ಮೂಲಕ ಆಚರಿಸಲಾಗಿದೆ.
ಹೌದು ! ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಜ್ಞಾನಾಧಾರಾ ಶಾಲಾ ಆವರಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳ ತಾಯಂದಿರ ಸಮ್ಮುಖದಲ್ಲಿ ಸರಸ್ವತಿಗೆ ಪೂಜೆ ನೆರವೇರಿಸಿ ನೈವೇದ್ಯ ಸಮರ್ಪಣೆ ಮಾಡಿ ಅರಿಶಿನ, ಕುಂಕುಮ, ಹೂ ನೀಡಿ ಉಡಿ ತುಂಬಲಾಗಿದೆ.
ಇನ್ನು ಮಹಿಳೆಯರಿಗೆ, ಮಕ್ಕಳಿಗೆ ಸಿಹಿ ಹಂಚುವ ಮೂಲಕ ಮಹಿಳಾ ದಿನಾಚರಣೆ ಪ್ರಾಮುಖ್ಯತೆಯನ್ನು ಜ್ಞಾನಧಾರಾ ಶಾಲಾ ಆಡಳಿತ ಮಂಡಳಿಯವರು ತಿಳಿಸಿಕೊಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/03/2022 06:24 pm