ಅಣ್ಣಿಗೇರಿ: ಪಂಪನ ನಾಡು ಅಣ್ಣಿಗೇರಿಯ ಆರಾಧ್ಯ ದೈವ ಶ್ರೀ ಅಮೃತೇಶ್ವರ ಜಾತ್ರೆಯ ನಿಮಿತ್ತ ದೇವಸ್ಥಾನಕ್ಕೆ ದೀಪದ ಅಲಂಕಾರ ಮತ್ತು ಹೂವಿನ ಅಲಂಕಾರ ಮಾಡಲಾಗಿದೆ.
ಕಣ್ಣಿಗೆ ಮುದ ನೀಡುವ ಹೂವಿನ ಅಲಂಕಾರ ಒಂದೆಡೆಯಾದ್ರೆ ಇನ್ನೊಂದೆಡೆ ಮೂಗಿಗೆ ಬಡಿಯುವ ಹೂವಿನ ಘಮಘಮ ಪರಿಮಳ ಒಟ್ಟಾರೆ ಹೂವಿನದ್ದೇ ಜಾತ್ರೆಯಾಗಿತ್ತು.
ಪ್ರತಿನಿತ್ಯ ದೇವರ ವಿಗ್ರಹಕ್ಕೆ ಹೂವಿನ ಅಲಂಕಾರ ಮಾಡುವುದು ಸಾಮಾನ್ಯ. ವಿಶೇಷ ದಿನದಂದೂ ಅಲ್ಲಿ ಹೂವಿನ ಅಲಂಕಾರ ನೋಡಬಹುದು. ಗುಡಿ ಗೋಪುರ, ಗೋಡೆ ಒಂದಿಂಚೂ ಬಿಡದೆ ಹೂವಿನ ಅಲಂಕಾರ ಮಾಡಲಾಗಿತ್ತು.
ಹೂದೋಟದಂತಾಗಿರುವ ದೇವಸ್ಥಾನದವನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಇದರೊಟ್ಟಿಗೆ ಬಣ್ಣ ಬಣ್ಣದ ದೀಪಗಳು ದೇವಸ್ಥಾನದ ತುಂಬೆಲ್ಲ ಕಾಣುತ್ತಿದ್ದವು. ಸೇವಂತಿಗೆ, ಗುಲಾಬಿ, ಚೆಂಡು ಹೂವು, ವಿವಿಧ ಜಾತಿಯ ಅಲಂಕಾರಿಕ ಹೂವುಗಳಿಂದ ಶೃಂಗಾರಗೊಂಡು ದೇವಸ್ಥಾನ ನೋಡಲು ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ವರದಿ: ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
14/12/2024 11:22 am