ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರಿನಲ್ಲಿ ಮಣ್ಣು ತಂದು ನಂತೂರು ಹೆದ್ದಾರಿ ಗುಂಡಿ ಮುಚ್ಚಿದ ವೃದ್ಧ – ವಿಡಿಯೋ ವೈರಲ್

ಮಂಗಳೂರು: ನಗರದ ನಂತೂರು ಹೆದ್ದಾರಿಯಲ್ಲಿನ ಗುಂಡಿಗೆ ವೃದ್ಧರೋರ್ವರು ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿರುವ ವೀಡಿಯೋ ವೈರಲ್ ಆಗಿದೆ.

ನಂತೂರು ಸರ್ಕಲ್‌ನಲ್ಲಿ ದೊಡ್ಡದಾದ ಹೊಂಡ ಸೃಷ್ಟಿಯಾಗಿತ್ತು. ಈ ಹೊಂಡಕ್ಕೆ ಬುಧವಾರ ರಾತ್ರಿ ಪಾಂಡುರಂಗ ಕಾಮತ್ ಎಂಬುವವರು ಕಾರಿನಲ್ಲಿಟ್ಟು ಗೋಣಿಯಲ್ಲಿ ಮಣ್ಣು ತಂದು ಮುಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.

ಅಂಗಡಿ ಹೊಂದಿರುವ ಈ ರಸ್ತೆಯಲ್ಲಿ ದಿನಕ್ಕೆ ಐದಾರು ಸಲ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿರುತ್ತೇನೆ. ಈ ಹೊಂಡದಿಂದ ವಾಹನದಲ್ಲಿ ಓಡಾಟ ನಡೆಸಲು ತೊಂದರೆ ಆಗುತ್ತದೆ. ಅದಕ್ಕಾಗಿ ಈ ಹೊಂಡ ಮುಚ್ಚಲು ಮಣ್ಣು ತಂದು ಸುರಿದಿದ್ದೇನೆ ಎಂದು ಪಾಂಡುರಂಗ ಕಾಮತ್ ಹೇಳಿದ್ದಾರೆ. ಇನ್ನಾದರೂ ಎನ್ಎಚ್ಎ ಇತ್ತ ಕಡೆ ಗಮನಹರಿಸಬೇಕಾಗಿದೆ.

Edited By : Suman K
Kshetra Samachara

Kshetra Samachara

09/01/2025 03:53 pm

Cinque Terre

2.72 K

Cinque Terre

0

ಸಂಬಂಧಿತ ಸುದ್ದಿ