ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರದಲ್ಲಿ ಹೆಚ್ಚುತ್ತಿದೆ ಕುಡುಕರ ಹಾವಳಿ - ಪೊಲೀಸರಿಂದ ಕಾರ್ಯಾಚರಣೆ

ಉಡುಪಿ: ಉಡುಪಿ ನಗರದಲ್ಲಿ ಕುಡುಕರ ಕಾಟ ಮಿತಿಮೀರಿದೆ. ರಾತ್ರಿ ಆಗುತ್ತಿದ್ದಂತೆ ಬಸ್ ನಿಲ್ದಾಣಗಳಲ್ಲಿ ಹತ್ತಾರು ಕುಡುಕರು ಮಲಗಿರುವ ದೃಶ್ಯ ಇತ್ತೀಚೆಗೆ ವೈರಲ್ ಆಗಿತ್ತು. ಕತ್ತಲಾಗುತ್ತಿದ್ದಂತೆ ಬಸ್ ನಿಲ್ದಾಣಗಳನ್ನು ಆಶ್ರಯಿಸುವ ಕುಡುಕರು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ.

ಮಹಿಳೆಯರು ಏಕಾಂಗಿಯಾಗಿ ಬಸ್ ನಿಲ್ದಾಣದಲ್ಲಿ ಇರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಇದೀಗ ಉಡುಪಿ ನಗರ ಪೊಲೀಸರು ಕುಡುಕರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಲಗಿದ್ದ ಕುಡುಕರನ್ನು ಎಬ್ಬಿಸಿ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ಮುಂದುವರಿಸುವುದಾಗಿ ಪೊಲೀಸರು ಹೇಳಿದ್ದಾರೆ.

Edited By : Suman K
PublicNext

PublicNext

10/01/2025 12:02 pm

Cinque Terre

16.75 K

Cinque Terre

1

ಸಂಬಂಧಿತ ಸುದ್ದಿ