ಕಾರ್ಕಳ : ಗಾಂಜಾ ಸೇವಿಸುತ್ತಿದ್ದ ಓರ್ವನನ್ನು ಪೊಲೀಸ್ ವಶಕ್ಕೆ ಪಡೆದಿರುವ ಘಟನೆ ನಿನ್ನೆ ಕಾರ್ಕಳದಲ್ಲಿ ಸಂಭವಿಸಿದೆ.
ಕಾರ್ಕಳದ ಕಸಬಾ ಗ್ರಾಮದ ಗಾಂಧಿ ಮೈದಾನದ ಬಳಿ ಗಾಂಜಾವನ್ನು ಪೇಪರ್‌ನಲ್ಲಿ ರೋಲ್ ಮಾಡಿ ಸಿಗರೇಟು ರೀತಿ ಸೇದುತ್ತಿದ್ದ ಝೀಶಾನ್ ಝಾಕೀರ್ ಅಹಮ್ಮದ್ (26) ಎಂಬಾತನನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ವಶಕ್ಕೆ ಪಡೆದಿರುತ್ತಾರೆ.
ಆರೋಪಿಯನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಝೀಶಾನ್ ಝಾಕೀರ್ ಅಹಮ್ಮದ್ ಮೂಲತ: ಶಿವಮೊಗ್ಗದವನಾಗಿದ್ದು, ಪ್ರಸ್ತುತ ಕಾರ್ಕಳ ನಿವಾಸಿಯಾಗಿದ್ದಾನೆ. ಇತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ ಜೈಲು ಶಿಕ್ಷೆಯಲ್ಲಿದ್ದವ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾನೆ ಎನ್ನಲಾಗುತ್ತಿದೆ.
Kshetra Samachara
10/01/2025 04:50 pm