ಮಂಗಳೂರು: ಇಬ್ಬರು ಕೆಲಸಗಾರರು ಅಂಗಡಿಯೊಂದರಿಂದ ಹಣ ಮತ್ತು ಮೊಬೈಲ್ ಕಳವುಗೈದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹಂಪನಕಟ್ಟೆಯ ಬಳಿಯಿರುವ ಅಜ್ವದ್ ಟೆಕ್ಸ್ ಟೈಲ್ಸ್ ಮತ್ತು ಪರ್ಪ್ಯೂಮ್ ಅಂಗಡಿಯಿಂದ ಡಿಸೆಂಬರ್ 26ರಂದು ಕೆಲಸಗಾರ ಅಫ್ಜಲ್ ಖಾನ್ ಎಂಬಾತ 2 ಲಕ್ಷ ರೂ.ಗಿಂತಲೂ ಅಧಿಕ ಮತ್ತು ಇನ್ನೊಬ್ಬ ಕೆಲಸಗಾರ ಮುಹಮ್ಮದ್ ಫಾಝಿಲ್ ಎಂಬಾತ 8 ಸಾವಿರ ರೂ. ಮೌಲ್ಯದ ಮೊಬೈಲ್ ಕಳವುಗೈದಿರುವುದಾಗಿ ಅಂಗಡಿಯ ಮಾಲಕ ಶೇಖ್ ಬಶೀರ್ ಅಹ್ಮದ್ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿ ಅಷ್ಟಲ್ ಖಾನ್ 2 ತಿಂಗಳಿನಿಂದ ಕೆಲಸ ಮಾಡುತ್ತಿದ್ದ. ಡಿಸೆಂಬರ್ 26ರಂದು ಬೆಳಗ್ಗೆ 8:30ಕ್ಕೆ ಕೆಲಸಕ್ಕೆ ಬಂದಿದ್ದು, ಮಧ್ಯಾಹ್ನ 1ರಿಂದ 1:30ರ ಮಧ್ಯೆ ಅಂಗಡಿಯ ಎಲ್ಲಾ ಸಿಬ್ಬಂದಿ ಮಸೀದಿಗೆ ಹೋದ ಸಂದರ್ಭ ನೋಡಿಕೊಂಡು ಕ್ಯಾಶ್‌ಡ್ರಾವರ್ ಒಡೆದು 2 ಲಕ್ಷ ರೂ.ಗಿಂತ ಹೆಚ್ಚು ನಗದನ್ನು ಅಂಗಡಿಯ ಕೀಯೊಂದಿಗೆ ಕಳವುಮಾಡಿಕೊಂಡು ಹೋಗಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಕೂಡ ಕಳವಾಗಿದೆ ಎಂದು ದೂರು ನೀಡಿದ್ದಾರೆ.
Kshetra Samachara
10/01/2025 09:49 am