ಪುಣೆ: ಯರವಾಡ ಪ್ರದೇಶದ ಕಚೇರಿಯೊಂದರ ಪಾರ್ಕಿಂಗ್ ಆವರಣದಲ್ಲಿ ಯುವಕನೊಬ್ಬ ಮಾರಕಾಸ್ತ್ರದಿಂದ ಹೊಡೆದು ಯುವತಿಯ ಕೊಲೆ ಮಾಡಿದ್ದಾನೆ. ಇದರ ಭಯಾನಕ ಸಿಸಿ ಕ್ಯಾಮರಾ ದೃಶ್ಯ ವೈರಲ್ ಆಗಿದೆ.
ಶುಭದಾ ಶಂಕರ್ ಕೋದಾರೆ (28) ಎಂಬ ಯುವತಿಯೇ ಕೊಲೆಯಾದವಳು. ಕೃಷ್ಣ ಸತ್ಯನಾರಾಯಣ ಕನೋಜಾ ಎಂಬಾತನೇ ಕೊಲೆ ಆರೋಪಿ. ಖಾಸಗಿ ಸಂಸ್ಥೆಯೊಂದರಲ್ಲಿ ಬಿಪಿಒ ಆಗಿ ಕೆಲಸ ಮಾಡುತ್ತಿದ್ದ ಶುಭದಾ ಆರೋಪಿ ಕೃಷ್ಣನಿಂದ ನಾಲ್ಕು ಲಕ್ಷ ಹಣ ಪಡೆದಿದ್ದಳಂತೆ. ಹಣ ಮರಳಿ ನೀಡುವ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದೇ ವಿಚಾರಕ್ಕೆ ಕೊಲೆ ಆಗಿರಬಹುದು ಎಂಬ ವಿಷಯ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆ ನಂತರ ಸಾರ್ವಜನಿಕರು ಕೃಷ್ಣನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
PublicNext
09/01/2025 06:42 pm