ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುದೀಪ್ ವಿರುದ್ಧ ಅಭಿಮಾನಿಗಳ ಬೇಸರ, ಸುದೀಪ್ ಮಗಳಿಗೆ ಕನ್ನಡ ಕಲಿಸಿಲ್ವಾ?

ಬೆಂಗಳೂರು: ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ zee ಕನ್ನಡ ಸರಿಗಮಪ ವೇದಿಕೆ ಮೇಲೆ ಕನ್ನಡ ಬಳಕೆ ಮಾಡದೇ ಇರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿವಾದ ಸೃಷ್ಟಿ ಮಾಡಿದೆ. ಸುದೀಪ್ ಅವರು ತಮ್ಮ ಮಗಳಿಗೆ ಕನ್ನಡ ಹೇಳಿಕೊಟ್ಟಿಲ್ವಾ ಅಂತ ಜನ ಕಾಮೆಂಟ್ ಮಾಡ್ತಾ ಇದ್ದಾರೆ.

ಎಸ್, zee ಕನ್ನಡ ಸರಿಗಮಪದಲ್ಲಿ ಸುದೀಪ್ ಅವರನ್ನು ಕರೆಯಿಸಿ ವಿಶೇಷ ಕಾರ್ಯಕ್ರಮ ಮಾಡಿದ್ರು. ಸುದೀಪ್ ಅವರ ಪತ್ನಿ ಹಾಗೂ ಮಗಳು ಕೂಡ ಸುರ್ಪ್ರೈಸ್ ಎಂಟ್ರಿ ಕೊಟ್ಟಿದ್ರು. ಅದರಲ್ಲೂ ವಿಶೇಷವಾಗಿ ತಂದೆ ಮಗಳ ಬಾಂಧವ್ಯ ತುಂಬಾನೇ ವಿಶೇಷವಾಗಿತ್ತು. ಸಾನ್ವಿ ತಂದೆಗಾಗಿ ಹಾಡು ಕೂಡ ಹಾಡಿದ್ರು, ಆದರೆ ಇದೆಲ್ಲದರ ನಡುವೆ ಸಾನ್ವಿ ಕನ್ನಡ ಬಳಕೆ ಮಾಡದೇ ಇರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಹಾಗೂ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಿ ಪಡಿಸಿದ್ದಾರೆ. ಇನ್ನು ಈ ಬಗ್ಗೆ ಜನ ಏನು ಹೇಳ್ತಾರೆ ನೋಡೋಣ ಬನ್ನಿ.

ಸದ್ಯ ಸುದೀಪ್ ಅವರ ಅಭಿಮಾನಿಗಳು ಕನ್ನಡ ವೇದಿಕೆ ಮೇಲೆ ಕನ್ನಡ ಬಳಕೆ ಮಾಡದಿರೋ ವಿಚಾರವಾಗಿ ಬೇಸರಗೊಂಡಿದ್ದು, ಸುದೀಪ್ ತನ್ನ ಮಗಳಿಗೆ ಕನ್ನಡ ಕಲಿಸಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Edited By : Suman K
PublicNext

PublicNext

09/01/2025 08:21 pm

Cinque Terre

72.33 K

Cinque Terre

4