ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಿಗರ ಮನಗೆದ್ದ ಸಂಸದ ತೇಜಸ್ವಿ ಸೂರ್ಯ ಭಾವಿ ಪತ್ನಿ

ಬೆಂಗಳೂರು ದಕ್ಷಿಣ ಸಂಸದ, 34 ವರ್ಷದ ತೇಜಸ್ವಿ ಸೂರ್ಯ ಅವರು ಖ್ಯಾತ ಗಾಯಕಿ, ಭರತನಾಟ್ಯ ಕಲಾವಿದೆ 28 ವರ್ಷದ ಶಿವಶ್ರೀ ಸ್ಕಂದಪ್ರಸಾದ್​ ಅವರವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹವು ಇದೇ ವರ್ಷ ಮಾರ್ಚ್ 4ರಂದು ನೆರವೇರಲಿದೆ ಎಂದು ಹೇಳಲಾಗುತ್ತಿದೆ.

ಶಿವಶ್ರೀ ಅವರು 1976ರಲ್ಲಿ ಬಿಡುಗಡೆಗೊಂಡಿರುವ ಡಾ.ರಾಜ್​ಕುಮಾರ್​ ಅಭಿನಯದ, 'ರಾಜಾ ನನ್ನ ರಾಜಾ' ಚಿತ್ರದ ಹಾಡನ್ನು ಭಾವಪೂರ್ವಕವಾಗಿ ಹಾಡಿದ್ದಾರೆ. ಈ ಹಾಡಿಗೆ ಹಲವಾರು ಮಂದಿ ಕಮೆಂಟ್ಸ್ ಮಾಡುತ್ತಿದ್ದು, 'ತೇಜಸ್ವಿ ಸೂರ್ಯ ಅವರ ನೆನಪು ಕಾಡುತ್ತಿದೆ' ಎಂದು ಗಾಯಕಿಯ ಕಾಲೆಳೆಯುತ್ತಿದ್ದಾರೆ. 'ಇನ್ನು ಸ್ವಲ್ಪ ದಿನವಷ್ಟೇ ತಡೆದುಕೊಳ್ಳಿ ಮೇಡಂ, ಆಮೇಲೆ ನೆನಪು ಕಾಡುವುದಿಲ್ಲ' ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.

ಶಿವಶ್ರೀ ಅವರ ಮೂಲ ಚೆನ್ನೈ ಆಗಿದ್ದರೂ, ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಗಾಯನ ಅವರ ಕಂಠಮಾಧುರ್ಯದಲ್ಲಿ ಮೂಡಿ ಬಂದಿವೆ. ಕಳೆದ ವರ್ಷದ ಜನವರಿಯಲ್ಲಿ ಅಯೋಧ್ಯೆಯ ಶ್ರೀರಾಮಲಲ್ಲಾ ಉದ್ಘಾಟನೆ ವೇಳೆ ಪೂಜಿಸಲೆಂದೇ ಹೂಗಳ ತಂದೆ ಹಾಡಿನ ಮೂಲಕ ಪ್ರಧಾನಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಯೂಟ್ಯೂಬ್‌ನಲ್ಲಿ ಸುಮಾರು ಎರಡು ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಶಿವಶ್ರೀ ಅವರು ಅದರಲ್ಲಿ ಭರತನಾಟ್ಯ, ಗಾಯನಗಳ ವಿಡಿಯೋ ಶೇರ್​ ಮಾಡಿದ್ದಾರೆ. ಅವುಗಳ ಪೈಕಿ ಹಲವು ಈಗ ಟ್ರೆಂಡಿಂಗ್​ನಲ್ಲಿವೆ. ಅವುಗಳಲ್ಲಿ ಒಂದು ನಿನದೇ ನೆನಪು ದಿನವೂ ಮನದಲ್ಲಿ ಹಾಡು.

Edited By : Vijay Kumar
PublicNext

PublicNext

08/01/2025 04:34 pm

Cinque Terre

49.55 K

Cinque Terre

4

ಸಂಬಂಧಿತ ಸುದ್ದಿ